ಕರ್ನಾಟಕ

karnataka

ಜೂ.1 ರಿಂದ ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ ಓಡಾಟ ಆರಂಭ...!

ಮಾರ್ಗಸೂಚಿ ಬಿಡುಗಡೆ ಮಾಡಿದ ಬಳಿಕ ದ.ಕದಲ್ಲಿ ಬಸ್ ಸಂಚಾರವನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯ. ಈ ಬಗ್ಗೆ ಇನ್ನೂ ಮಾಹಿತಿ ದೊರಕದ ಕಾರಣ ಬಸ್ ಮಾಲೀಕರಿಗೆ ಬೇಕಾದ ತಯಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬಸ್​ ಮಾಲೀಕರು ತಿಳಿಸಿದರು.

By

Published : May 25, 2020, 9:56 PM IST

Published : May 25, 2020, 9:56 PM IST

private bus re start in mangalore
ಖಾಸಗಿ ಬಸ್ ಓಡಾಟ ಆರಂಭ

ಮಂಗಳೂರು : ಜಿಲ್ಲೆಯಲ್ಲಿ ಖಾಸಗಿ ಬಸ್​ಗಳು ಜೂ.1ರಿಂದ ಓಡಾಟ ನಡೆಸಲಾರಂಭಿಸಲಿದ್ದು, ಮೊದಲಿಗೆ ಯಾವುದೇ ರೂಟ್​ನಲ್ಲಿ 5 ಬಸ್​ಗಳಿಗೆ ಪರವಾನಗಿ ಇದ್ದರೂ ಕೇವಲ ಮೂರು ಬಸ್​ಗಳನ್ನು ರಸ್ತೆಗಿಳಿಸಲು ಮಾಲೀಕರು ನಿರ್ಧರಿಸಿದ್ದಾರೆ.

ಹಲವು ದಿನಗಳ ನಂತರ ಬಸ್​ ಸಂಚಾರ ಆರಂಭವಾಗುವುದರಿಂದ, ಎಷ್ಟು ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸಬಹುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನ, ಸ್ಯಾನಿಟೈಸರ್ ಬಳಕೆ, ಬಸ್‌ ದರ ಏರಿಕೆ ಬಗ್ಗೆ ಜಿಲ್ಲಾಡಳಿತ ಯಾವುದೇ ನಿರ್ಧಾರ ಇನ್ನೂ ಪ್ರಕಟಿಸಿಲ್ಲ. ಈ ಮಾರ್ಗಸೂಚಿ ಬಿಡುಗಡೆ ಮಾಡಿದ ಬಳಿಕ ಬಸ್ ಸಂಚಾರವನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯ. ಈ ಬಗ್ಗೆ ಇನ್ನೂ ಮಾಹಿತಿ ದೊರಕದ ಕಾರಣ ಬಸ್ ಮಾಲೀಕರಿಗೆ ಬೇಕಾದ ತಯಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಬಸ್​ ಮಾಲೀಕರು ತಿಳಿಸಿದರು.

ಈ ಕುರಿತು ಮಾತನಾಡಿದ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್, ರಾಜ್ಯದಲ್ಲಿ ನಾಲ್ಕನೇ ಹಂತದ ಲಾಕ್​ಡೌನ್​ನಲ್ಲಿ ಖಾಸಗಿ ಬಸ್ ಗಳ ಸಂಚಾರಕ್ಕೆ ಸರ್ಕರ ಅನುಮತಿ ನೀಡಿತ್ತು. ಆದರೆ ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್​ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ ನಿಂದ ಮೇ 26 ರವರೆಗೆ ಖಾಸಗಿ ಬಸ್​ಗಳಿಗೆ ತೆರಿಗೆ ವಿನಾಯಿತಿ ದೊರಕಿದೆ. ಆದ್ದರಿಂದ ನಾವು ಮೇ 27ರಿಂದ ಬಸ್ ಗಳ ಓಡಾಟ ಆರಂಭಿಸಬಹುದಿತ್ತು. ಆದರೆ, ಮೇ 27 ರಿಂದ ಮೇ‌ 31ರವರೆಗೆ ಬಸ್ ಓಡಿಸಬೇಕಾದರೆ ಇಡೀ ತಿಂಗಳ ತೆರೆಗೆ ಪಾವತಿ ಮಾಡಬೇಕು. ಈ ಹಿನ್ನೆಲೆಯಲ್ಲಿ ಜೂ.1 ರಿಂದ ಬಸ್ ಸಂಚಾರ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.

ABOUT THE AUTHOR

...view details