ಮಂಗಳೂರು: ಶೃಂಗೇರಿ ಮಠ ಭೇಟಿಯ ಹಿನ್ನೆಲೆ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಮಂಗಳೂರಿಗೆ ಆಗಮಿಸಿದ್ದಾರೆ.
ಶೃಂಗೇರಿ ಭೇಟಿ: ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ ನ್ಯಾಯಮೂರ್ತಿಗಳು! - ಶೃಂಗೇರಿ ಮಠ ಭೇಟಿ
ಮಂಗಳೂರಿನ ಬಿಜೈ ನಲ್ಲಿರುವ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಅವರು ವಾಸ್ತವ್ಯ ಹೂಡಿರುವ ಮುಖ್ಯನ್ಯಾಯಮೂರ್ತಿಗಳು, ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಲಿದ್ದಾರೆ.

ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ ನ್ಯಾಯಮೂರ್ತಿಗಳು!
ಎಸ್ ಎ ಬೊಬ್ಡೆ ಅವರು ಇಂದು ಶೃಂಗೇರಿ ಮಠಕ್ಕೆ ತೆರಳುತ್ತಿದ್ದಾರೆ. ರಾತ್ರಿ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಬಿಜೈ ನಲ್ಲಿರುವ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ. ಮುಖ್ಯನ್ಯಾಯಮೂರ್ತಿಗಳು ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಲಿದ್ದಾರೆ.
ದೇವಾಲಯದ ಭೇಟಿಯ ಬಳಿಕ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಮತ್ತೆ ಅವರು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.