ಕರ್ನಾಟಕ

karnataka

ETV Bharat / state

ಪತ್ರಕರ್ತ ಮನೋಹರ ಪ್ರಸಾದ್ 'ಕರಾವಳಿ ಗೌರವ ಪ್ರಶಸ್ತಿ'ಗೆ ಆಯ್ಕೆ.. - ಕರಾವಳಿ ಉತ್ಸವ

ಮಂಗಳೂರಿನ ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯುವ ಕರಾವಳಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಮನೋಹರ ಪ್ರಸಾದ್​ರವರಿಗೆ 'ಕರಾವಳಿ ಗೌರವ ಪ್ರಶಸ್ತಿ' ನೀಡಿ ಸನ್ಮಾನಿಸಲಾಗುತ್ತಿದೆ.

Karavali Gourava award
ಪತ್ರಕರ್ತ ಮನೋಹರ ಪ್ರಸಾದ್ ಗೆ 'ಕರಾವಳಿ ಗೌರವ ಪ್ರಶಸ್ತಿ'

By

Published : Jan 17, 2020, 9:25 PM IST

ಮಂಗಳೂರು:ನಗರದಲ್ಲಿ ನಡೆಯುವ ಕರಾವಳಿ ಉತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಓರ್ವ ಸಾಧಕರಿಗೆ ನೀಡುವ 'ಕರಾವಳಿ ಗೌರವ ಪ್ರಶಸ್ತಿ'ಗೆ ಈ ಬಾರಿ ಪತ್ರಕರ್ತ ಮನೋಹರ ಪ್ರಸಾದ್ ಭಾಜನರಾಗಿದ್ದಾರೆ.

ಮನೋಹರ್ ಪ್ರಸಾದ್ ಉದಯವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸುಮಾರು 12 ದೇಶಗಳಲ್ಲಿ ಪತ್ರಿಕೋದ್ಯಮದ ಬಗ್ಗೆ ಉಪನ್ಯಾಸ ನೀಡಿರುವ ಇವರು, ಟಿವಿ, ಆಕಾಶವಾಣಿ ಸೇರಿ 350ಕ್ಕೂ ಅಧಿಕ ನಿರೂಪಣೆ ಮಾಡಿರುತ್ತಾರೆ. ಕಳೆದ 36 ವರ್ಷಗಳಲ್ಲಿ ಮನೋಹರ ‌ಪ್ರಸಾದ್ ಅವರ 3000ಕ್ಕೂ ಅಧಿಕ ಲೇಖನ, ಸಂದರ್ಶನ, ತನಿಖಾ ವರದಿ, ನುಡಿಚಿತ್ರಗಳು ಪ್ರಕಟವಾಗಿವೆ.

ಈ ಹಿನ್ನೆಲೆಯಲ್ಲಿ ಮನೋಹರ ಪ್ರಸಾದ್ ಅವರಿಗೆ ಜನವರಿ 19ರಂದು ಸಂಜೆ 5.30ಕ್ಕೆ ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯುವ ಕರಾವಳಿ ಉತ್ಸವ ಸಮಾರೋಪ ಸಮಾರಂಭದಲ್ಲಿ 'ಕರಾವಳಿ ಗೌರವ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುವುದು‌.

ABOUT THE AUTHOR

...view details