ಕರ್ನಾಟಕ

karnataka

ETV Bharat / state

ಜು. 1ರಿಂದ ಪುತ್ತೂರಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ - Job Skills Training Camp

ಜು. 1ರಿಂದ 6ರವರೆಗೆ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿ‌ನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಆಯೋಜಿಸಲಾಗಿದೆ.

Job Skills Training camp
ಜು.1 ರಿಂದ ಪುತ್ತೂರಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಆರಂಭ

By

Published : Jun 24, 2020, 7:21 PM IST

ಮಂಗಳೂರು: ಜು. 1ರಿಂದ 6ರವರೆಗೆ ಮಂಗಳೂರು ವಿಭಾಗ ಗ್ರಾಮ ವಿಕಾಸ ಸಮಿತಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ದ.ಕ ಜಿಲ್ಲಾ ಸಹಕಾರ ಭಾರತಿ ವತಿಯಿಂದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವನ್ನು ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿ‌ನಲ್ಲಿ ಆಯೋಜಿಸಲಾಗಿದೆ ಎಂದು ಗ್ರಾಮ ವಿಕಾಸ ಸಮಿತಿಯ ವಿಭಾಗ ಸಂಯೋಜಕ ಪ್ರವೀಣ್ ಸರಳಾಯ ಹೇಳಿದರು.

ಜು. 1ರಿಂದ ಪುತ್ತೂರಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರವನ್ನು ಜು. 1ರಂದು ಬೆಳಗ್ಗೆ 10 ಗಂಟೆಗೆ ಪುತ್ತೂರು ಸಹಾಯಕ ಕಮಿಷನರ್​ ಡಾ. ಯತೀಶ್ ಉಳ್ಳಾಲ್ ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಕಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ ಗೋಪಾಲ್ ಚೆಟ್ಟಿಯಾರ್ ಪ್ರಧಾನ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್‌ನ ಉಪನ್ಯಾಸಕರು ಮತ್ತು ಸಂಪನ್ಮೂಲ ವ್ಯಕ್ತಿಗಳು ತರಬೇತುದಾರರಾಗಿ ಪಾಲ್ಗೊಳ್ಳಲಿದ್ದು, ನೆಲಹಾಸು, ಕ್ಲಬಿಂಗ್, ವಿದ್ಯುತ್ ಉಪಕರಣಗಳ ತರಬೇತಿ, ಹೈನುಗಾರಿಕೆ ತರಬೇತಿ, ತೆಂಗು, ಅಡಿಕೆ ಮರ ಏರುವ ತರಬೇತಿ, ಫ್ಯಾಬ್ರಿಕೇಶನ್ ಕೆಲಸದ ತರಬೇತಿ, ಫುಡ್ ಟೆಕ್ನಾಲಜಿ, ಫ್ಯಾಶನ್ ಡಿಸೈನಿಂಗ್, ಹೋಂ ನರ್ಸಿಂಗ್, ಮೊಬೈಲ್ ಫೋನ್ ಸರ್ವೀಸಿಂಗ್, ಸಿಸಿಟಿವಿ ಅಳವಡಿಕೆ ತರಬೇತಿ, ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ದುರಸ್ತಿ ತರಬೇತಿ, ಕಸಿ ಕಟ್ಟುವ ತರಬೇತಿ, ಗ್ರಾಹಕ ಮಾಹಿತಿ ಸೇವಾ ಕೇಂದ್ರದ ನಿರ್ವಹಣಾ ತರಬೇತಿ ನೀಡಲಾಗುವುದು.

ಈಗಾಗಲೇ 300 ಮಂದಿ ನೋಂದಣಿ ಮಾಡಿಕೊಂಡಿದ್ದು, ಪ್ರತಿ ದಿನ ಬೆಳಗ್ಗೆ 10ರಿಂದ ಅಪರಾಹ್ನ 4ರವರೆಗೆ ದಿನವೂ 5 ತಾಸುಗಳ ಕಾಲ ಒಟ್ಟು 30 ತಾಸುಗಳ ತರಬೇತಿ ನೀಡಲಾಗುತ್ತದೆ. ಸ್ವ ಉದ್ಯೋಗಕ್ಕೆ ಸರ್ಕಾರದಿಂದ ದೊರೆಯುವ ಸಹಾಯಧನ, ಸಾಲ ಮತ್ತಿತರ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಲಾಗುವುದು. ತರಬೇತಿಗೆ ರೂ. 250 ಪ್ರತಿನಿಧಿ ಶುಲ್ಕವಿರುತ್ತದೆ. ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ವಸತಿ ಸೌಲಭ್ಯ ಪಡೆದುಕೊಂಡವರು ರಾತ್ರಿಯ ಊಟ ಮತ್ತು ಬೆಳಗಿನ ಉಪಹಾರಕ್ಕಾಗಿ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ವಸತಿ ಇರುವವರಿಗೆ ಬೆಳಗ್ಗೆ ಯೋಗಾಭ್ಯಾಸದ ಅವಕಾಶವಿದ್ದು, ಯೋಗದ ಉಡುಪಿನೊಂದಿಗೆ ಹಾಜರಾಗಬೇಕು. ತರಬೇತಿಯ ನಂತರ ಪ್ರಮಾಣಪತ್ರ ನೀಡಲಾಗುತ್ತದೆ ಎಂದರು.

ABOUT THE AUTHOR

...view details