ಮಂಗಳೂರು: ಶ್ರೀ ರಾಮಕೃಷ್ಣ ಮಿಷನ್ಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ಘೋಷಣೆ ಅಗಿರುವುದು ಸಂತಸದ ವಿಚಾರ. ಈ ಪ್ರಶಸ್ತಿ ಮಂಗಳೂರಿನ ಜನತೆಗೆ ದೊರಕಿದ ಪ್ರಶಸ್ತಿ ಎಂದು ಶ್ರೀ ರಾಮಕೃಷ್ಣ ಮಿಷನ್ನ ಕಾರ್ಯದರ್ಶಿ ಶ್ರೀ ಜಿತಕಾಮಾನಂದ ಸ್ವಾಮೀಜಿ ಹೇಳಿದರು.
ಮಂಗಳೂರಿನ ಜನತೆಯ ಸೇವಾ ಮನೋಭಾವವನ್ನು ನಾವು ಸ್ವಚ್ಛ ಮಂಗಳೂರು ಕಲ್ಪನೆಯಲ್ಲಿ ತೊಡಗಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಕೊಟ್ಟಿದೆ. 2015 ರಿಂದ 2019ರವರೆಗೆ ನಿರಂತರ ಐದು ವರ್ಷಗಳ ಕಾಲ ಈ ಸ್ವಚ್ಛ ಭಾರತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಸುಮಾರು 10 ಸಾವಿರ ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದು, ಬಹಳಷ್ಟು ಜನರು ಇದಕ್ಕೆ ಸಹಕಾರವನ್ನೂ ನೀಡಿದ್ದರು. 20 ಲಕ್ಷ ಮಾನವ ಗಂಟೆ ಇದರಲ್ಲಿ ವ್ಯಯವಾಗಿದೆ ಎಂದು ಹೇಳಿದರು.