ಮಂಗಳೂರು:ಕಾಲುಂಗುರ ರಿಪೇರಿಗಾಗಿ ಜ್ಯುವೆಲ್ಲರಿ ಅಂಗಡಿಗೆ ತಂದ ಅಪ್ರಾಪ್ತ ಬಾಲಕಿಗೆ ಅಂಗಡಿ ಮಾಲೀಕ ಲೈಂಗಿಕ ಕಿರುಕುಳ ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಕೆಪದವು ಎಂಬಲ್ಲಿ ನಡೆದಿದೆ.
ಕಾಲುಂಗುರ ರಿಪೇರಿಗೆ ಬಂದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ.. ಜ್ಯುವೆಲರಿ ಮಾಲೀಕ ಅರೆಸ್ಟ್.. - ಲೈಂಗಿಕ ಕಿರುಕುಳ
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಕ್ಕೆಪದವು ಧನಲಕ್ಷ್ಮೀ ಜ್ಯುವೆಲ್ಲರ್ಸ್ ಮಾಲೀಕ ಯೋಗೀಶ್ ಎಂಬಾತನನ್ನು ಮಂಗಳೂರಿನ ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.
ಲೈಂಗಿಕ ಕಿರುಕುಳ
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಕ್ಕೆಪದವು ಧನಲಕ್ಷ್ಮೀ ಜ್ಯುವೆಲ್ಲರ್ಸ್ ಮಾಲೀಕ ಯೋಗೀಶ್ ಎಂಬಾತನನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.
ಜುಲೈ 31ರಂದು ಸಂಜೆ ಅಪ್ರಾಪ್ತ ಬಾಲಕಿ ತನ್ನ ತಾಯಿಯ ಕಾಲುಂಗರ ರಿಪೇರಿಗೆಂದು ಜ್ಯುವೆಲ್ಲರಿ ಅಂಗಡಿಗೆ ಬಂದಾಗ ಆರೋಪಿ ಯೋಗೀಶ್ ಅಸಭ್ಯವಾಗಿ ವರ್ತಿಸಿದ್ದಾನೆ. ಬಾಲಕಿಯನ್ನು ಅಂಗಡಯೊಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಬಾಲಕಿ ತಾಯಿ ಪುಂಜಲ್ ಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಯೋಗೀಶ್ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.