ದಕ್ಷಿಣ ಕನ್ನಡ: ಬಿಜೆಪಿ ಬರ್ತದೆ, ನಾವು ಸಾಯುತ್ತೇವೆ. ದುರಂಹಕಾರ ಬಿಡದಿದ್ದರೆ ಇನ್ನೂ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಸ್ವಪಕ್ಷೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಬರ್ತದೆ, ನಾವು ಸಾಯ್ತಿವಿ... ಸ್ವಪಕ್ಷೀಯರ ವಿರುದ್ಧ ಜನಾರ್ದನ ಪೂಜಾರಿ ಆಕ್ರೋಶ - ಸ್ವಪಕ್ಷೀಯರ ವಿರುದ್ಧ ಜನಾರ್ದನ ಪೂಜಾರಿ ಆಕ್ರೋಶ
ಬಿಜೆಪಿ ಬರ್ತದೆ, ನಾವು ಸಾಯುತ್ತೇವೆ. ದುರಂಹಕಾರ ಬಿಡದಿದ್ದರೆ ಇನ್ನೂ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಸ್ವಪಕ್ಷೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಅಹಂಕಾರ ಮಾಡಿದರೆ ಬಿಜೆಪಿಯನ್ನು ತಡೆಯಲು ಆಗುವುದಿಲ್ಲ ಎಂದು ಮೊದಲೇ ಕೈಮುಗಿದು ಕಣ್ಣೀರು ಸುರಿಸಿ ಹೇಳಿದ್ದೆ. ಆದರೆ ಪಕ್ಷದವರಿಗೆ ಅದು ಅರ್ಥ ಆಗಿಲ್ಲ. ಈಗಲಾದರೂ ಅರ್ಥ ಆಯಿತಾ ಎಂದು ಪ್ರಶ್ನಿಸಿದರು.
ಕೆಲವು ತಿಂಗಳ ಹಿಂದೆ ಪಕ್ಷದವರಿಗೆ ದುರಂಹಕಾರ ಮಾಡಬೇಡಿ, ಸರಿ ಮಾಡಿಕೊಂಡು ಹೋಗಿ ಎಂದು ಹೇಳಿದ್ದೆ. ಆದರೆ ಅದನ್ನು ಕೇಳದೆ ಈಗ ಅವರು ಅನುಭವಿಸುತ್ತಿದ್ದಾರೆ. ಇನ್ನೂ ಕೂಡ ಅನುಭವಿಸಲಿದ್ದಾರೆ ಎಂದರು. ಅಹಂಕಾರ ಬಿಡಬೇಕು ಮತ್ತು ಜನರ ಮಾತಿಗೆ ಬೆಲೆ ಕೊಡಬೇಕು. ನಾವು ಯಜಮಾನರು ಎಂದು ಕೆಲವು ನಾಯಕರು ಅಂದುಕೊಂಡಿದ್ದಾರೆ. ಇದಕ್ಕಾಗಿ ಅನುಭವಿಸುತ್ತಾರೆ ಎಂದರು.