ಕರ್ನಾಟಕ

karnataka

ETV Bharat / state

ಸುರತ್ಕಲ್: ಇಡ್ಯಾ ಬೀಚ್ ಕೇಂದ್ರ ಉದ್ಘಾಟನೆ - Iyaa Beach

ಇಡ್ಯಾ ಬೀಚ್ ಗೆ ಯುವಕರು ಹೊಸ ರೂಪ ನೀಡಿ ಅಭಿವೃದ್ಧಿಪಡಿಸಿದ್ದು, ಅದನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು.

Idya beach
Idya beach

By

Published : Aug 17, 2020, 4:48 PM IST

ಸುರತ್ಕಲ್:ಸುರತ್ಕಲ್ ನ ಇಡ್ಯಾದಲ್ಲಿ ಸ್ಥಳೀಯ ಯುವಕರು ಸೇರಿ ಬೀಚ್ ಗೆ ಹೊಸ ರೂಪ ನೀಡಿದ್ದು ನೂತನ ಬೀಚ್ ಅಭಿವೃದ್ಧಿಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು.

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ ಇಡ್ಯಾ ಬೀಚ್ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಜತೆ ಚರ್ಚಿಸಿ ಅನುದಾನ ತರಲು ಯೋಜನೆ ರೂಪಿಸಲಾಗುವುದು ಎಂದರು.

ಬೀಚ್ ಗೆ ಕುಟುಂಬ ಸಮೇತ ಆಗಮಿಸಿ ಒಂದಿಷ್ಟು ಕಾಲ ಕಳೆದು ಸಂತಸದಿಂದ ತೆರಳುತ್ತಾರೆ. ಇಲ್ಲಿಯ ಸ್ಥಳೀಯ ಯುವಕರು ಕೊರೊನಾ ಸಂದರ್ಭ ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಆಸಕ್ತಿದಾಯಕ ಕೆಲಸ ಮಾಡಿ ಇತರರಿಗೂ ಸಂತಸವಾಗುವಂತ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮೇಯರ್ ದಿವಾಕರ್, ಉಪಮೇಯರ್ ವೇದಾವತಿ,
ಸ್ಥಳೀಯ ಕಾರ್ಪೊರೇಟರ್ ನಯನ ಆರ್ ಕೋಟ್ಯಾನ್, ಬಿಜೆಪಿ ಕಾರ್ಪೊರೇಟರ್ ಗಳು, ಸ್ಥಳೀಯ ಮುಖಂಡರು, ಬಿಜೆಪಿ ಪಕ್ಷದ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details