ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಅವರು ‘ಬಿಎಸ್ಎನ್ಎಲ್ ನೌಕರರು ದೇಶದ್ರೋಹಿ’ಗಳು ಎಂದು ನೀಡಿರುವ ಹೇಳಿಕೆಗೆ ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಐವನ್ ಡಿಸೋಜ, ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳೆಂಬ ಹೇಳಿಕೆ ನೀಡಿರುವ ಅನಂತಕುಮಾರ್ ಹೆಗಡೆ ಅವರು ಭಾರತೀಯನಾಗಲು ಕೂಡ ಯೋಗ್ಯರಲ್ಲ ಎಂದಿದ್ದಾರೆ.
ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳು: ಸಂಸದ ಅನಂತಕುಮಾರ್ ಹೆಗಡೆ
"ದೇಶದ್ರೋಹಿಗಳನ್ನು ಪತ್ತೆ ಹಚ್ಚುವ ಅನಂತಕುಮಾರ್ ಹೆಗ್ಡೆಯವರೇ ನೀವು ಸಂಸದರಾಗಲು ಅಲ್ಲ, ಭಾರತೀಯನಾಗಲು ಕೂಡ ಯೋಗ್ಯರಲ್ಲ. ಬಿಎಸ್ಎನ್ಎಲ್ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದೇ ಇದೀಗ ಬಡಪಾಯಿ ಬಿಎಸ್ಎನ್ಎಲ್ ನೌಕರರಿಗೆ ದೇಶದ್ರೋಹಿ ಪಟ್ಟವನ್ನು ಕಟ್ಟುತ್ತೀರಲ್ವ? ನಾಚಿಕೆಯಾಗಬೇಕು ಬಿಜೆಪಿಯವರಿಗೆ " ಎಂದು ಟ್ವೀಟ್ ಮಾಡಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.