ಕರ್ನಾಟಕ

karnataka

ETV Bharat / state

ಸೋಮಶೇಖರ್ ರೆಡ್ಡಿ ಅವರನ್ನ ಪಕ್ಷದಿಂದ ಬಿಜೆಪಿ ಉಚ್ಛಾಟಿಸಲಿ: ಐವನ್ ಡಿಸೋಜ - ಐವನ್ ಡಿಸೋಜ  ಸುದ್ದಿ

ಸಿಎಎ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದ ಸೋಮಶೇಖರ್ ರೆಡ್ಡಿ ವಿರುದ್ಧ ಆಕ್ರೋಶ. ಪಕ್ಷದಿಂದ ಉಚ್ಛಾಟಿಸುವಂತೆ ಬಿಜೆಪಿಗೆ ಡಿಸೋಜ ಆಗ್ರಹ.

Ivan Dsoza  Talking Against To Somashekar Reddy
ಐವನ್ ಡಿಸೋಜ

By

Published : Jan 4, 2020, 2:03 PM IST

ಮಂಗಳೂರು: ಬಿಜೆಪಿ ಪಕ್ಷದಿಂದ ಸೋಮಶೇಖರ್ ರೆಡ್ಡಿ ಅವರನ್ನು ಉಚ್ಛಾಟಿಸಬೇಕು ಎಂದು ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ಶಾಸಕ ಸೋಮಶೇಖರ್ ರೆಡ್ಡಿ ನೀಡಿರುವ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸೋಮಶೇಖರ್ ರೆಡ್ಡಿ ಬಿಜೆಪಿಯ ಅಭಿಪ್ರಾಯ ಹೇಳಿದ್ದಾರೆ. ಒಂದು ವೇಳೆ ಆ ಹೇಳಿಕೆ ಪಕ್ಷದ್ದಲ್ಲ ಎಂದಾದ್ರೆ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಿ. ಪ್ರಧಾನಮಂತ್ರಿ, ಮುಖ್ಯಮಂತ್ರಿ ಕ್ಷಮೆಯಾಚಿಸಲಿ ಎಂದರು.

ಐವನ್ ಡಿಸೋಜ

ಸೋಮಶೇಖರ್ ರೆಡ್ಡಿ ಹೇಳಿಕೆ ದೇಶವನ್ನು ವಿಭಜಿಸುವ ಹೇಳಿಕೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.

ಸಿಎಎ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ ಅಂತಾ ಸೋಮಶೇಖರ್ ರೆಡ್ಡಿ ಅವರ ಶುಕ್ರವಾರ ಹೇಳಿಕೆ ನೀಡಿದ್ದು, ವಿವಾದಕ್ಕೆ ಗುರಿಯಾಗಿತ್ತು.

ABOUT THE AUTHOR

...view details