ಮಂಗಳೂರು: ಪ್ರಧಾನಿಗೆ ಕ್ಯಾಮರಾದ ಮುಂದೆ ಕಾಣಿಸಿಕೊಳ್ಳುವುದೇ ಮುಖ್ಯ. ಬೀಚ್ನಲ್ಲಿ ಕಸ ಹಾಕಿದ್ದು ಅವರೇ, ಹೆಕ್ಕಿದ್ದು ಅವರೇ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಬೀಚ್ನಲ್ಲಿ ಕಸ ಹಾಕಿದ್ದೂ ಅವರೇ, ಹೆಕ್ಕಿದ್ದು ಅವರೇ.. ಮೋದಿ ವಿರುದ್ಧ ಐವನ್ ಡಿಸೋಜಾ ಕಿಡಿ! - mangalore news
ಪ್ರಧಾನಿಗೆ ರಾಜ್ಯದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಕಾಳಜಿಯಿಲ್ಲ. ಗೃಹಮಂತ್ರಿ ಮತ್ತು ಹಣಕಾಸು ಸಚಿವರು ನೆರೆ ಹಾನಿ ವೀಕ್ಷಣೆಗೆ ವೈಮಾನಿಕ ಸಮೀಕ್ಷೆ ಮಾಡಿ ಜಾಲಿಟ್ರಿಪ್ ಮಾಡಿ ಹೋದರು. ಪ್ರಧಾನಮಂತ್ರಿ ಆ ಜಾಲಿ ಟ್ರಿಪ್ಗೂ ಬರಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಗೆ ರಾಜ್ಯದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಕಾಳಜಿಯಿಲ್ಲ. ಗೃಹಮಂತ್ರಿ ಮತ್ತು ಹಣಕಾಸು ಸಚಿವರು ನೆರೆ ಹಾನಿ ವೀಕ್ಷಣೆಗೆ ವೈಮಾನಿಕ ಸಮೀಕ್ಷೆ ಮಾಡಿ ಜಾಲಿಟ್ರಿಪ್ ಮಾಡಿ ಹೋದರು. ಪ್ರಧಾನಮಂತ್ರಿ ಆ ಜಾಲಿ ಟ್ರಿಪ್ಗೂ ಬರಲಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ನೆರೆಹಾನಿಯಿಂದ 1 ಲಕ್ಷ ಕೋಟಿ ರೂ.ನಷ್ಟವಾಗಿದೆ ಎಂದು ರಾಜ್ಯ ಸರ್ಕಾರವೇ ಹೇಳುತ್ತದೆ. ಆದರೆ, ಎನ್ಡಿಆರ್ಎಫ್ ಪ್ರಕಾರ ನಷ್ಟವಾದದ್ದು 35 ಸಾವಿರ ಕೋಟಿ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು 1200 ಕೋಟಿ, ರಾಜ್ಯ ಸರ್ಕಾರ ಈವರೆಗೆ ನೆರೆ ಸಂತ್ರಸ್ತರಿಗೆ ನೀಡಿದ್ದು 2936 ಕೋಟಿ. ರಾಜ್ಯದ ಸಂತ್ರಸ್ತರಿಗೆ ನೆರವಾಗಲು 96 ಸಾವಿರ ಕೋಟಿ ಬೇಕು. ಆದರೆ, ಅಷ್ಟು ಹಣ ರಾಜ್ಯ ಸರ್ಕಾರದ ಬಳಿ ಇಲ್ಲ. ಅದಕ್ಕಾಗಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ನಾವು ಒತ್ತಾಯಿಸಿದರೂ ರಾಜ್ಯ ಸರ್ಕಾರ ಅದು ಬೇಡ ಎಂದು ಮೊಂಡುತನ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.