ಮಂಗಳೂರು:ಕನಕಪುರದ ಕಪಾಲಬೆಟ್ಟದಲ್ಲಿ ನಿರ್ಮಿಸಲುದ್ದೇಶಿಸಿರುವ ಏಸು ಪ್ರತಿಮೆಯನ್ನು ಧರ್ಮಾನುಯಾಯಿಗಳು ನ್ಯಾಯಬದ್ದವಾಗಿ ಮಾಡುತ್ತಿದ್ದಾರೆ. ಆದುದರಿಂದ ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಡಿಕೆಶಿ ಏಸು ಪ್ರತಿಮೆಯನ್ನು ಸ್ವಂತಕ್ಕಾಗಿ ಮಾಡ್ತಾ ಇಲ್ಲಾ : ಐವನ್ ಡಿಸೋಜ - ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ
ಏಸು ಪ್ರತಿಮೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮಂಗಳೂರಿನಲ್ಲಿ ಹೇಳಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1662 ರಿಂದ ಕಪಾಲಬೆಟ್ಟದಲ್ಲಿ ಎಲ್ಲರೂ ಅನೋನ್ಯತೆಯಿಂದ ಬಾಳುತ್ತಿದ್ದಾರೆ. ಕಪಾಲಬೆಟ್ಟ ಪ್ರದೇಶ 14 ಮಂದಿ ಕ್ರಿಶ್ಚಿಯನ್ ಧರ್ಮಗುರುಗಳನ್ನು,114 ಸಿಸ್ಟರ್ ಗಳನ್ನು ನೀಡಿದ ಪ್ರದೇಶ. 2016 ರಲ್ಲಿ ಹಾರೋಬಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಆರಂಭವಾಗಿ ಸರ್ಕಾರದಿಂದ ನ್ಯಾಯಯುತವಾಗಿ ಏಸು ಪ್ರತಿಮೆಗೆ ಜಾಗ ಪಡೆದುಕೊಂಡಿದೆ. ಡಿ.ಕೆ ಶಿವಕುಮಾರ್ ಅವರು ತಮ್ಮ ಕ್ಷೇತ್ರದಲ್ಲಿ ಆಗುತ್ತಿರುವ ಪ್ರತಿಮೆಗೆ ತಮ್ಮ ಸಹಾಯ ಘೋಷಿಸಿದ್ದಾರೆ ಅಷ್ಟೇ ಎಂದರು.
ಏಸು ಪ್ರತಿಮೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ಸಮುದಾಯಕ್ಕೆ ನೋವು ತಂದಿದ್ದು, ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಐವನ್ ಡಿಸೋಜ ವಿನಂತಿಸಿದರು.