ಕರ್ನಾಟಕ

karnataka

ETV Bharat / state

BPL​​ ಮಾತ್ರವಲ್ಲ APL​ ಕಾರ್ಡ್​​ದಾರರಿಗೂ ಪರಿಹಾರ ನೀಡಿ: ಐವನ್ ಡಿಸೋಜಾ - ಲಸಿಕೆ ಅಭಿಯಾನ

ಲಸಿಕೆ ಅಭಿಯಾನ ಕುರಿತಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಕಿಡಿಕಾರಿದ್ದು, ಎಲ್ಲಿರಿಗೂ ಉಚಿತ ಲಸಿಕೆ ನೀಡಲಾಗುವುದು ಎನ್ನುತ್ತೀರಿ, ಆದರೆ ಖಾಸಗಿ ಆಸ್ಪತ್ರೆಯಲ್ಲಿ ಹಣ ಕೊಟ್ಟು ಲಸಿಕೆ ಪಡೆಯಬೇಕಿದೆ ಎಂದಿದ್ದಾರೆ.

Ivan_Dsouza
ಐವನ್ ಡಿಸೋಜ

By

Published : Jun 22, 2021, 7:52 PM IST

ಮಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಪರಿಹಾರ ಎಂಬುದು ಸರ್ಕಾರದ ನಿರ್ಧಾರ ತಪ್ಪು. ಅದೂ 1 ಲಕ್ಷ ರೂ. ಪರಿಹಾರ ಬೇಡ, 5 ಲಕ್ಷ ರೂ. ಪರಿಹಾರ ನೀಡಿ. ಹಾಗೆಯೇ ಎಪಿಎಲ್ ಕಾರ್ಡುದಾರರಿಗೂ ಪರಿಹಾರ ನೀಡಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ‌ ಪರಿಹಾರ ಹಣವನ್ನು ಸರ್ಕಾರದಿಂದ ಕೇಳಿ ತರುವ ಶಕ್ತಿ ಸಂಸದರಿಗೆ ಶಾಸಕರಿಗೆ, ಮಂತ್ರಿಗಳಿಗೆ ಇಲ್ಲ. ಅವರು ನರಸತ್ತವರು ಎಂದು ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಹೆಚ್ಚಿದ್ದರೂ, ಅನ್​ಲಾಕ್ ಮಾಡಲಾಗಿದೆ. ಆದರೆ, ಅನ್​ಲಾಕ್ ಆಗಲು ಪ್ರಥಮ ಪ್ರಾಶಸ್ತ್ಯವಿರುವ ದಕ್ಷಿಣ ಕನ್ನಡ ಜಿಲ್ಲೆ ಲಾಕ್​ಡೌನ್ ಆಗಿದೆ ಎಂದರು.

ಬಿಪಿಎಲ್​​ ಮಾತ್ರವಲ್ಲ ಎಪಿಎಲ್​ ಕಾರ್ಡ್​​ದಾರರಿಗೂ ಪರಿಹಾರ ನೀಡಿ: ಐವನ್ ಡಿಸೋಜಾ

‘ಸೋಂಕು ಹೆಚ್ಚಾಗಲು ಜನಪ್ರತಿನಿಧಿಗಳೇ ಕಾರಣ’

ಇದಕ್ಕೆ ಜಿಲ್ಲೆಯ ಅಧಿಕಾರಿಗಳ, ಚುನಾಯಿತ ಜನಪ್ರತಿನಿಧಿಗಳ ವೈಫಲ್ಯವೇ ಕಾರಣ‌. ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಬರಬೇಕಾಗಿದ್ದ ಹಣ ಹಾಗೂ ಮೂಲ ಸೌಕರ್ಯಗಳ ತರಲು ವಿಫಲರಾಗಿರೋದೇ ಕಾರಣ. ಜಿಲ್ಲೆಯಲ್ಲಿ ಪಾಸಿಟಿವಿಟಿ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಾವಿನ ಸಂಖ್ಯೆಯೂ ಜಾಸ್ತಿಯಾಗುವುದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳೇ ಕಾರಣರಾಗಿದ್ದು, ಇದರ ನೇರ ಹೊಣೆಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಹಿಸಿಕೊಳ್ಳಬೇಕು ಎಂದರು.

ಲಸಿಕೆ ಎಲ್ಲರಿಗೂ ಉಚಿತ ಎಂದು ಹೇಳಲಾಗುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಡೆದು ಲಸಿಕೆ ನೀಡಲಾಗುತ್ತಿದೆ. ಹಾಗಾದರೆ ಉಚಿತ ಲಸಿಕೆ ಎಂದು ಯಾಕೆ ಹೇಳಲಾಗುತ್ತಿದೆ. ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಬೇಕಾದರೂ ಲಸಿಕೆ ನೀಡಿ, ಆದರೆ ಅದು ಉಚಿತವಾಗಿರಬೇಕು. ಲಸಿಕೆ ಮಾರಾಟದ ವಸ್ತು ಆಗಬಾರದು.

ದೇಶದ 130 ಕೋಟಿ ಜನರಿಗೂ ಉಚಿತವಾಗಿ ಲಸಿಕೆ ದೊರೆಯಬೇಕು. ಲಸಿಕೆಗಾಗಿ 35 ಸಾವಿರ ಕೋಟಿ ರೂ. ದೇಶದ ಜನರ ತೆರಿಗೆ ಹಣವನ್ನು ಮೀಸಲಿಟ್ಟ ಮೇಲೂ ಲಸಿಕೆ ವ್ಯಾಪಾರೀಕರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ:ಮಂಗಳೂರು ಪೊಲೀಸ್ ‌ಕಮಿಷನರ್ ನೇತೃತ್ವದಲ್ಲಿ ಸಿಟಿ ರೌಂಡ್ಸ್​​-ನಿಯಮ ಉಲ್ಲಂಘಿಸಿದವರಿಗೆ ದಂಡ

ABOUT THE AUTHOR

...view details