ಮಂಗಳೂರು : ಸರ್ಕಾರ ಮೋಟಾರು ವಾಹನ ಕಾಯ್ದೆಯನ್ನು ಜನರಲ್ಲಿ ಜಾಗೃತಿ ಮೂಡಿಸದೆ ಏಕಾಏಕಿ ತಿದ್ದುಪಡಿ ಮಾಡಿದೆ. ಕೇಂದ್ರ ಯಾವುದೇ ಕಾಯ್ದೆ ತಂದರೂ ಅದನ್ನು ತಕ್ಷಣ ಜಾರಿಗೊಳಿಸುವ ಅಗತ್ಯ ಇಲ್ಲ. ಆದ್ದರಿಂದ ಅಕ್ಟೋಬರ್ನಲ್ಲಿ ನಡೆಯುವ ಅಧಿವೇಶನದವರೆಗೆ ವಾಹನ ದಂಡ ವಸೂಲಿಯನ್ನು ತಡೆ ಹಿಡಿಯಲಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಜನರಲ್ಲಿ ಜಾಗೃತಿ ಮೂಡಿಸದೆ ಏಕಾಏಕಿ ವಾಹನ ದಂಡ ವಸೂಲಾತಿ ಅಕ್ಷಮ್ಯ: ಐವನ್ ಡಿಸೋಜ
ಕೇಂದ್ರ ಯಾವುದೇ ಕಾಯ್ದೆ ತಂದರೂ ಅದನ್ನು ತಕ್ಷಣ ಜಾರಿಗೊಳಿಸುವ ಅಗತ್ಯ ಇಲ್ಲ. ನಮ್ಮ ರಾಜ್ಯದ ಭೌಗೋಳಿಕ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ ಬಳಿಕ ವಾಹನ ಕಾಯ್ದೆಯನ್ನು ಅನುಷ್ಠಾನಗೊಳಿಸಬಹುದಾ ಎಂದು ಮೊದಲು ಚರ್ಚೆಯಾಗಬೇಕಿದೆ. ಬರೀ ಕಾನೂನು ಮಾತ್ರ ಮಾಡುವುದಲ್ಲ. ಜನರಿಗೆ ಅದರ ಬಗ್ಗೆ ಜಾಗೃತಿ ಮೂಡಿಸಿ ಎಂದು ಹೇಳಿದರು
ಮನಪಾದ ಕಚೇರಿಯಲ್ಲಿ ಮಾತನಾಡಿ, ನಮ್ಮ ರಾಜ್ಯದ ಭೌಗೋಳಿಕ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ ಬಳಿಕ ವಾಹನ ಕಾಯ್ದೆಯನ್ನು ಅನುಷ್ಠಾನಗೊಳಿಸಬಹುದಾ ಎಂದು ಮೊದಲು ಚರ್ಚೆಯಾಗಬೇಕಿದೆ. ಆದ್ದರಿಂದ ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಹೊಸ ಕಾಯ್ದೆಯ ಮೂಲಕ ಹತ್ತಿಪ್ಪತ್ತು ಪಟ್ಟು ಹೆಚ್ಚು ದಂಡ ವಿಧಿಸಲಾಗುತ್ತಿದೆ. ಸಮಾಜದ ಜನರನ್ನು ರಕ್ಷಣೆ ಮಾಡಲು ಕಾನೂನು ಜಾರಿ ಮಾಡುವುದು, ಜನರಿಗೆ ಕೊಡಲು ಅಲ್ಲ. ಪಶ್ಚಿಮ ಬಂಗಾಳ, ಗುಜರಾತ್ ಪಂಜಾಬ್, ಗೋವಾ ರಾಜ್ಯಗಳಲ್ಲಿ ಈ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗಿಲ್ಲ. ನಮ್ಮದೇ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಲ್ಲಿ ಹೆಲ್ಮೆಟ್ ಕಡ್ಡಾಯ ಇದೆ. ಇದು ರಾಜ್ಯದ ಅನುಕೂಲ ಶಾಸ್ತ್ರ. ಲೈಸೆನ್ಸ್ ಸಿಗಲು 45 ದಿನಗಳು ಬೇಕಾಗುತ್ತದೆ. ಆದರೆ ಅದಕ್ಕಿಂತ ಮೊದಲೇ ದಂಡ ವಿಧಿಸಲಾಗುತ್ತದೆ. ಬರೀ ಕಾನೂನು ಮಾತ್ರ ಮಾಡುವುದಲ್ಲ. ಜನರಿಗೆ ಅದರ ಬಗ್ಗೆ ಜಾಗೃತಿ ಮೂಡಿಸಿ ಎಂದು ಹೇಳಿದರು.