ಕರ್ನಾಟಕ

karnataka

ETV Bharat / state

ಹಬ್ಬಗಳ ಮೂಲ ಸಂದೇಶವೇ ಎಲ್ಲರೂ ಒಟ್ಟಾಗಿ ಬಾಳುವುದು: ಐವನ್​​​ ಡಿಸೋಜ - etv bharat

ನಗರದ ಪಂಪ್​ವೆಲ್ ಬಳಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್​ನಲ್ಲಿ ನಡೆದ ಈ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಬಾಂಧವರಿಗೆ ನಮಾಜ್ ಮುಗಿಸಿ ತಮ್ಮ ಉಪವಾಸ ಅಂತ್ಯಗೊಳಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಂರು ಮಾತ್ರವಲ್ಲದೆ ಹಿಂದೂ, ಕ್ರಿಶ್ಚಿಯನ್, ಜೈನ ಹೀಗೆ ವಿವಿಧ ಧರ್ಮಗಳ ಜನರು ಭಾಗವಹಿಸಿದ್ದರು.

ಐವನ್​ ಡಿಸೋಜ

By

Published : May 30, 2019, 2:42 AM IST

ಮಂಗಳೂರು: ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ನೇತೃತ್ವದಲ್ಲಿ 4ನೇ ವರ್ಷದ ಇಫ್ತಾರ್ ಕೂಟ ನಡೆಯಿತು.

ನಗರದ ಪಂಪ್​ವೆಲ್ ಬಳಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್​ನಲ್ಲಿ ನಡೆದ ಈ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಬಾಂಧವರಿಗೆ ನಮಾಜ್ ಮುಗಿಸಿ ತಮ್ಮ ಉಪವಾಸ ಅಂತ್ಯಗೊಳಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಂರು ಮಾತ್ರವಲ್ಲದೆ ಹಿಂದೂ, ಕ್ರಿಶ್ಚಿಯನ್, ಜೈನ ಹೀಗೆ ವಿವಿಧ ಧರ್ಮಗಳ ಜನರು ಭಾಗವಹಿಸಿದ್ದರು.

ಸೌಹಾರ್ದ ಇಫ್ತಾರ್ ಕೂಟ ಆಯೋಜನೆ ಮಾಡಿದ್ದ ಐವನ್ ಡಿಸೋಜ ಮಾತನಾಡಿ, ಈ ಇಫ್ತಾರ್ ಕೂಟದ ಮೂಲಕ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಮಾಜಕ್ಕೆ ಸಾರಿದಂತಾಗುತ್ತದೆ. ಎಲ್ಲಾ ಜಾತಿಗಳ ಹಬ್ಬಗಳನ್ನು ಎಲ್ಲರೂ ಆಚರಿಸಿದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ತನ್ನಿಂದ ತಾನೇ ಮೂಡಿ ಬರುತ್ತದೆ ಎಂದು ಹೇಳಿದರು.

ಮುಸ್ಲಿಂ ಬಾಂಧವರಿಗೆ ಇಫ್ತಾರ್​ ಕೂಟ

ನಾನು ಕಳೆದ ನಾಲ್ಕು ವರ್ಷಗಳಿಂದ ಸೌಹಾರ್ದ ರಂಜಾನ್ ಆಯೋಜನೆ ಮಾಡುತ್ತಿದ್ದು, ಇದಕ್ಕೆ ಮಂಗಳೂರಿನ ಜನರಿಂದ ಗುಣಾತ್ಮಕವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀವು ಆಚರಿಸುವ ರಂಜಾನ್, ಕ್ರಿಸ್​ಮಸ್, ದೀಪಾವಳಿ ಹಬ್ಬಗಳಿಂದ ಸಮಾಜದಲ್ಲಿ ಏಕತೆ ಮೂಡಿಸಲು ಸಾಧ್ಯವಿದೆ ಎಂದು ಪ್ರತಿಯೊಬ್ಬರೂ ನನ್ನಲ್ಲಿ ಹೇಳುತ್ತಿರುತ್ತಾರೆ. ಎಲ್ಲಾ ಹಬ್ಬಗಳ ಸಾರ ಕೂಡಾ ನಾವೆಲ್ಲರೂ ಒಗ್ಗಟ್ಟಾಗಿ, ಸೌಹಾರ್ದತೆಯಿಂದ ಬಾಳುವುದಾಗಿದೆ ಎಂದು ಹೇಳುತ್ತ, ಐವನ್ ಡಿಸೋಜ ರಂಜಾನ್ ಹಬ್ಬಕ್ಕೆ ಶುಭ ಕೋರಿದರು.

ABOUT THE AUTHOR

...view details