ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಐಟಿ ದಾಳಿ: ನಾಲ್ವರು ಪ್ರತಿಷ್ಠಿತ ಉದ್ಯಮಿಗಳ ಮನೆ, ಕಚೇರಿ ಶೋಧ - ಪ್ರತಿಷ್ಠಿತ ಇಬ್ಬರು ಉದ್ಯಮಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ

ಮಂಗಳೂರಿನ ಇಬ್ಬರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ
ಮಂಗಳೂರಿನ ಇಬ್ಬರು ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

By

Published : Feb 17, 2021, 9:54 AM IST

Updated : Feb 17, 2021, 3:35 PM IST

09:45 February 17

ಎ.ಜೆ.ಶೆಟ್ಟಿ, ಯೆನಪೋಯಗೆ ಐಟಿ ಶಾಕ್

ಇಬ್ಬರು ಉದ್ಯಮಿಗಳಿಗೆ ಐಟಿ ಶಾಕ್​

ಮಂಗಳೂರು: ನಗರದ ನಾಲ್ವರು ಪ್ರತಿಷ್ಠಿತ ಉದ್ಯಮಿಗಳ ಮನೆ, ಕಚೇರಿ, ಆಸ್ಪತ್ರೆ ಹಾಗೂ ಇತರ ಸಂಸ್ಥೆಗಳ ಮೇಲೆ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉದ್ಯಮಿ ‌ಎ.ಜೆ.ಶೆಟ್ಟಿಯವರ ಎ.ಜೆ ಆಸ್ಪತ್ರೆ, ಅಬ್ದುಲ್ಲ ಕುಂಞಿಯವರ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆ, ಮನೆ ಹಾಗೂ ಕಚೇರಿ, ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಶ್ರೀನಿವಾಸ ಕಾಲೇಜು ಸಂಸ್ಥೆಗಳ ಮಾಲೀಕರ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.  

ಓದಿ : ಬೆಂಗಳೂರಲ್ಲೂ ಐಟಿ ದಾಳಿ: ಸಪ್ತಗಿರಿ, ಬಿಜಿಎಸ್​ ಆಸ್ಪತ್ರೆ, ವಿದ್ಯಾಸಂಸ್ಥೆಯಲ್ಲಿ ದಾಖಲೆ ಪರಿಶೀಲನೆ

ಐಟಿ ಅಧಿಕಾರಿಗಳು ಉದ್ಯಮಿಗಳ ಮನೆ,‌ ಆಸ್ಪತ್ರೆ, ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. 

Last Updated : Feb 17, 2021, 3:35 PM IST

ABOUT THE AUTHOR

...view details