ಕರ್ನಾಟಕ

karnataka

ETV Bharat / state

ಮಂಗಳೂರು ವಿಮಾನ ನಿಲ್ದಾಣಕ್ಕೂ ಬರಲಿದೆ ಇಸ್ರೇಲ್ ತಂತ್ರಜ್ಞಾನ.. ಇದರ ವೈಶಿಷ್ಟ್ಯತೆ ಹೀಗಿದೆ.. - ಮ್ಮುವಿನ ವಾಯುನೆಲೆಯ ಮೇಲೆ ಡ್ರೋಣ್ ದಾಳಿ

ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಅಳವಡಿಸಿರುವ ಈ ರೀತಿಯ ಇಸ್ರೇಲ್ ಮೂಲದ ತಂತ್ರಜ್ಞಾನವನ್ನು ಮಂಗಳೂರಿನ ವಿಮಾನ ನಿಲ್ದಾಣಕ್ಕೂ ಅಳವಡಿಕೆ ಮಾಡುವ ಚಿಂತನೆಯಿದೆ. ಅಲ್ಲದೆ ಈ ಮೂಲಕ ರಾಡಾರ್ ತಂತ್ರಜ್ಞಾನ ಬಳಸಿಕೊಂಡು ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳನ್ನು ನಿಷ್ಕ್ರಿಯಗೊಳಿಸಲೂ ಸಾಧ್ಯವಿದೆ..

Mangalore airport
ಮಂಗಳೂರು ವಿಮಾನ ನಿಲ್ದಾಣ

By

Published : Jul 2, 2021, 6:58 AM IST

ಮಂಗಳೂರು :ಜಮ್ಮುವಿನ ವಾಯುನೆಲೆಯ ಮೇಲೆ ಡ್ರೋಣ್ ದಾಳಿ ನಡೆದ ಬೆನ್ನಲ್ಲೇ ದೇಶಾದ್ಯಂತ ಬಂದರು, ವಿಮಾನ ನಿಲ್ದಾಣ ಸೇರಿ ಪ್ರಮುಖ ಕೇಂದ್ರಗಳಲ್ಲಿ ಮುಂಜಾಗ್ರತೆ ವಹಿಸಲಾಗಿದೆ. ಆದರೂ ಏಕಾಏಕಿ ಡ್ರೋಣ್ ದಾಳಿಯಾದಲ್ಲಿ ಅದನ್ನು ನೇರವಾಗಿ ಎದುರಿಸಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ.

ವರ್ಷದ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ರೀತಿಯ ಆಟಿಕೆ ವಸ್ತುವೊಂದು ಹಾರಾಟವಾಗಿದ್ದು, ಇದು ಆತಂಕಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಮತ್ತೊಮ್ಮೆ ಡ್ರೋಣ್ ಮಾದರಿಯ ವಸ್ತು ಹಾರಾಟ ನಡೆಸಿದ್ದು, ಅದನ್ನು ಭದ್ರತಾ ಪಡೆ ವಶಕ್ಕೆ ಪಡೆದಿತ್ತು. ಈ ಬಗ್ಗೆ ಸಿಐಎಸ್ಎಫ್ ಭದ್ರತಾ ಪಡೆ ನಿಲ್ದಾಣದ ಆವರಣದಲ್ಲಿ ಕೂಲಂಕಷವಾಗಿ ತಪಾಸಣೆ ನಡೆಸಿತ್ತು.

ಇದೀಗ ಜಮ್ಮು ವಾಯುನೆಲೆಯ ಮೇಲೆ ಡ್ರೋಣ್ ಅಟ್ಯಾಕ್ ಆದ ಬಳಿಕ ಅಲರ್ಟ್ ಆಗಿದ್ದು, ಮಂಗಳೂರಿನ ಪೊಲೀಸ್ ಇಲಾಖೆಯು ಏವಿಯೇಶನ್ ಸಚಿವಾಲಯದ ಏಜನ್ಸಿ ಜೊತೆಗೆ ಮಾತುಕತೆ ನಡೆಸಿದೆ. ವಿಮಾನ ನಿಲ್ದಾಣದ ಪರಿಸರದಲ್ಲಿ ಡ್ರೋಣ್ ಇನ್ನಿತರ ಯಾವುದೇ ರೀತಿಯ ಹಾರಾಟ ನಡೆಸುವಂತಿಲ್ಲ ಎಂಬ ಕಾನೂನಿದೆ. ಡ್ರೋಣ್ ಅಥವಾ ಇನ್ನಿತರ ಸಾಧಾರಣ ಗಾತ್ರದ ವಸ್ತುಗಳು ವಿಮಾನ ಟೇಕಾಫ್ ಅಥವಾ ಲ್ಯಾಂಡ್ ಆಗುವ ವೇಳೆ ವಿಮಾನಕ್ಕೆ ಡಿಕ್ಕಿಯಾದಲ್ಲಿ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ.

ಇದನ್ನೇ ಅಸ್ತ್ರವಾಗಿಟ್ಟುಕೊಳ್ಳುವ ಭಯೋತ್ಪಾದಕರು ಡ್ರೋಣ್ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಭದ್ರತಾ ಪಡೆ ಯಾವುದೇ ಅಹಿತಕರ ವಸ್ತುವಿನ ಹಾರಾಟ ಕಂಡು ಬಂದ ಕೂಡಲೇ ನಾಶ ಪಡಿಸುವ ತಂತ್ರಜ್ಞಾನದ ಅಗತ್ಯ ಇರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಇದಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರದಡಿ ತಂತ್ರಜ್ಞಾನ ಅಳವಡಿಸುವ ಬಿಎಸಿಎಸ್ ಎನ್ನುವ ಸಂಸ್ಥೆ ಇದೀಗ ಮಂಗಳೂರಿನಲ್ಲಿ ಇಸ್ರೇಲ್ ಟೆಕ್ನಾಲಜಿ ಅಳವಡಿಸಲು ಮುಂದಾಗಿದೆ.

ಈ ಮೂಲಕ ಯಾವುದೇ ಡ್ರೋಣ್ ಅಥವಾ ವಿರೋಧಿ ರಾಷ್ಟ್ರಗಳಿಂದ ಬರುವ ಕ್ಷಿಪಣಿಗಳು ದೇಶದ ವಾತಾವರಣ ಪ್ರವೇಶ ಮಾಡಿದ ಕೂಡಲೇ ಅದರಷ್ಟಕ್ಕೇ ಉಡಾಯಿಸುವ ತಂತ್ರಜ್ಞಾನ ಇಸ್ರೇಲ್‌ನಲ್ಲಿದೆ. ಅದೇ ರೀತಿಯಲ್ಲಿ ವಿಮಾನ ನಿಲ್ದಾಣ, ಬಂದರು ಆವರಣದಲ್ಲಿ ಯಾವುದೇ ವಸ್ತುಗಳು ಹಾರಿ ಬಂದ ತಕ್ಷಣ ಅವನ್ನು ತನ್ನಿಂದ ತಾನೇ ಸ್ಫೋಟಿಸಬಲ್ಲ ಅಥವಾ ನಿಷ್ಕ್ರಿಯಗೊಳಿಸಬಲ್ಲ ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಅಳವಡಿಸಿರುವ ಈ ರೀತಿಯ ಇಸ್ರೇಲ್ ಮೂಲದ ತಂತ್ರಜ್ಞಾನವನ್ನು ಮಂಗಳೂರಿನ ವಿಮಾನ ನಿಲ್ದಾಣಕ್ಕೂ ಅಳವಡಿಕೆ ಮಾಡುವ ಚಿಂತನೆಯಿದೆ. ಅಲ್ಲದೆ ಈ ಮೂಲಕ ರಾಡಾರ್ ತಂತ್ರಜ್ಞಾನ ಬಳಸಿಕೊಂಡು ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳನ್ನು ನಿಷ್ಕ್ರಿಯಗೊಳಿಸಲೂ ಸಾಧ್ಯವಿದೆ.

ಇದೀಗ ವಿಮಾನ ಸಚಿವಾಲಯದಡಿ ಭದ್ರತಾ ಕೆಲಸಗಳನ್ನು ನಿರ್ವಹಿಸುವ ಬ್ಯೂರೋ ಆಫ್ ಸಿವಿಲ್ ಏವಿಯೇಶನ್ ಸೆಕ್ಯುರಿಟಿ ಏಜನ್ಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತೆಯ ಬಗ್ಗೆ ಕಣ್ಣಿರಿಸಲು ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಈ ಬಗ್ಗೆ ಇಸ್ರೇಲ್ ತಂತ್ರಜ್ಞಾನ ಅಳವಡಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ABOUT THE AUTHOR

...view details