ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಸ್ಯಾಟ್ಲೈಟ್ ಫೋನ್ ವಿಚಾರ ಸದ್ದು ಮಾಡುತ್ತಿದೆ.
ಜಿಲ್ಲೆಯಲ್ಲಿ ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಸ್ಯಾಟ್ಲೈಟ್ ಫೋನ್ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದರ ಬೆನ್ನತ್ತಿ ಗುಪ್ತಚರ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.

ಭಾರತದಲ್ಲಿ ಸ್ಯಾಟ್ಲೈಟ್ ಫೋನ್ ಬಳಕೆಗೆ ನಿಷೇಧವಿದ್ದು, ಇದರ ನಡುವೆ ಇವುಗಳ ಬಳಕೆ ಆತಂಕ ಮೂಡಿಸಿದೆ. ಗಲ್ಫ್ ದೇಶಗಳಲ್ಲಿ ಸ್ಯಾಟ್ಲೈಟ್ ಫೋನ್ ಬಳಕೆಗೆ ಅವಕಾಶವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಮಂದಿ ಗಲ್ಫ್ ದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವರಲ್ಲಿ ಯಾರಾದರೂ ಭಾರತದಲ್ಲಿ ನಿಷೇಧವಿರುವ ಬಗ್ಗೆ ಮಾಹಿತಿ ಇಲ್ಲದೇ ಇಲ್ಲಿಗೆ ತಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಸ್ಯಾಟ್ಲೈಟ್ ಫೋನ್ಗಳ ಬಳಕೆ ತಿಂಗಳಿಗೊಮ್ಮೆಯಾದರೂ ಬೆಳಕಿಗೆ ಬರುತ್ತದೆ. ಮಂಗಳೂರಿನ ಸಮುದ್ರದಲ್ಲಿ ಹಡಗುಗಳು ತೆರಳುವ ಸಂದರ್ಭದಲ್ಲಿ ಸ್ಯಾಟ್ಲೈಟ್ ಫೋನ್ ಗಳ ಬಳಕೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಇದರ ಬಗ್ಗೆ ಮಾಹಿತಿ ಕಲೆಹಾಕಲು ತೊಡಗಿದೆ.
ಈ ಬಗ್ಗೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಈಟಿವಿ ಭಾರತ ಜೊತೆ ಪ್ರತಿಕ್ರಿಯಿಸಿದ್ದು, ಸ್ಯಾಟ್ ಲೈಟ್ ಫೋನ್ ಬಳಕೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಗುಪ್ತಚರ ಇಲಾಖೆ ತನಿಖೆಯ ಬಗ್ಗೆ ಮಾಹಿತಿ ಇಲ್ಲ. ಯಾರನ್ನಾದರೂ ಬಂಧಿಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ಸಹಕಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.