ಕರ್ನಾಟಕ

karnataka

ಮಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್​ನ ಅಂತಾರಾಷ್ಟ್ರೀಯ ಸಭೆ: ದೇಶ-ವಿದೇಶಗಳಿಂದ ಪ್ರತಿನಿಧಿಗಳ ಆಗಮನ

By

Published : Dec 27, 2019, 4:32 PM IST

ಮಂಗಳೂರಿನಲ್ಲಿ ಮೊದಲ ಬಾರಿಗೆ ವಿಶ್ವಹಿಂದು ಪರಿಷತ್​ನ ಅಂತಾರಾಷ್ಟ್ರೀಯ ಸಭೆ ಆಯೋಜನೆಗೊಂಡಿದೆ. ಕಾರ್ಯಕ್ರಮಕ್ಕೆ ಭಾರತದ ಎಲ್ಲ ರಾಜ್ಯಗಳಿಂದ ಹಾಗೂ ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ, ಮಲೇಶಿಯಾ, ಇಟಲಿ, ಥಾಯ್ಲೆಂಡ್​​, ಸೌತ್ ಆಫ್ರಿಕಾ, ಬಾಂಗ್ಲಾದೇಶ ಮುಂತಾದ 32 ದೇಶಗಳ 350ಕ್ಕೂ ಅಧಿಕ‌ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

VHP International conference
ವಿಶ್ವಹಿಂದು ಪರಿಷತ್​ನ ಅಂತಾರಾಷ್ಟ್ರೀಯ ಸಭೆ

ಮಂಗಳೂರು:ವಿಶ್ವಹಿಂದೂ ಪರಿಷತ್​ನ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಬೈಠಕ್ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜನೆಗೊಂಡಿದೆ.

ವಿಶ್ವಹಿಂದು ಪರಿಷತ್​ನ ಅಂತಾರಾಷ್ಟ್ರೀಯ ಸಭೆ

ಮಂಗಳೂರಿನ ಸಂಘ ನಿಕೇತನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾರತದ ಎಲ್ಲ ರಾಜ್ಯಗಳಿಂದ ಹಾಗೂ ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ, ಮಲೇಶಿಯಾ, ಇಟಲಿ, ಥಾಯ್ಲೆಂಡ್​​, ಸೌತ್ ಆಫ್ರಿಕಾ, ಬಾಂಗ್ಲಾದೇಶ ಮುಂತಾದ 32 ದೇಶಗಳ 350ಕ್ಕೂ ಅಧಿಕ‌ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಅಲ್ಲದೇ ರಾಷ್ಟ್ರೀಯ ಸ್ವಯಂ ಸೇವಕ‌ ಸಂಘದ ಸಹ ಕಾರ್ಯವಾಹಕ ಭಯ್ಯಾಜಿ‌ ಜೋಶಿ, ವಿಶ್ವಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ, ವಿಶ್ವಹಿಂದು ಪರಿಷತ್​ನ ಅಂತರ್​ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ವಿಶ್ವಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, ವಿಶ್ವಹಿಂದೂ ಪರಿಷತ್​ನ ಅಂತಾರಾಷ್ಟ್ರೀಯ ಉಪಾಧ್ಯಕ್ಷ ಚಂಪತ್ ರಾಯ್ ಮುಂತಾದ ಪ್ರಮುಖರು‌ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಈ ಬೈಠಕ್ ನಲ್ಲಿ ದೇಶದ ಪ್ರಮುಖ ಪ್ರಸ್ತುತ ವಿಷಯಗಳಾದ ರಾಮ ಮಂದಿರ ನಿರ್ಮಾಣ, ಎನ್​ಆರ್​ಸಿ, ಸಿಎಎ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಅಲ್ಲದೆ ಗೋಸಂರಕ್ಷಣೆ, ಮತಾಂತರ, ಘರ್ ವಾಪಸಿ, ಸ್ತ್ರೀಯರ ಮೇಲಿನ ದೌರ್ಜನ್ಯಗಳ ಕುರಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅನೇಕ ಪ್ರಮುಖರು ಸೇರಿ ಚರ್ಚೆ ನಡೆಸಲಿದ್ದಾರೆ.

ಈ ಕಾರ್ಯಕ್ರಮದ ಆತಿಥ್ಯವನ್ನು ವಿಎಚ್​ಪಿ ಕರ್ನಾಟಕ ಹಾಗೂ ಮಂಗಳೂರು ವಿಭಾಗ ವಹಿಸಿಕೊಳ್ಳಲಿದ್ದು, ಆರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಗಳ ಪ್ರತಿನಿಧಿಗಳ ಭತ್ಯೆ, ವಸತಿ, ಊಟೋಪಚಾರ ಸೇರಿದಂತೆ ಸುಮಾರು 60 ಲಕ್ಷ ರೂ. ವೆಚ್ಚ ತಗುಲಲಿದೆ.

For All Latest Updates

ABOUT THE AUTHOR

...view details