ಕರ್ನಾಟಕ

karnataka

ETV Bharat / state

ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ 'ಅಂತಾರಾಷ್ಟ್ರೀಯ ಸ್ವಚ್ಛತಾ ಅಭಿಯಾನ' - ಕಡಲ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯ

ಮಂಗಳೂರು ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು, ಪ್ರೊಫೆಸರ್​ಗಳು ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ ಅಭಿಯಾನದ ನಿಮಿತ್ತ ಇಂದು ಬೆಳಗ್ಗೆ ತಣ್ಣೀರು ಬಾವಿ ಬೀಚ್​​ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

'ಅಂತಾರಾಷ್ಟ್ರೀಯ ಸ್ವಚ್ಛತಾ ಅಭಿಯಾನ'

By

Published : Sep 21, 2019, 12:12 PM IST

ಮಂಗಳೂರು: ನಗರದ ಎಕ್ಕೂರಿನ ಮಂಗಳೂರು ಮೀನುಗಾರಿಕಾ ಕಾಲೇಜು, ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ಸಿಐಎಸ್​ಎಫ್ ಜಂಟಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ ಅಭಿಯಾನ ಇಂದು ಬೆಳಗ್ಗೆ ತಣ್ಣೀರು ಬಾವಿ ಬೀಚ್ ಪರಿಸರದಲ್ಲಿ ನಡೆಯಿತು‌.

ಈ ಸಂದರ್ಭ ಮಂಗಳೂರು ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು, ಪ್ರೊಫೆಸರ್​​ಗಳು, ಸಿಬ್ಬಂದಿ, ಸಿಐಎಸ್ಎಫ್, ಕೋಸ್ಟ್ ಗಾರ್ಡ್​ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಬಳಿಕ ಸಮುದ್ರದ ಸುತ್ತಮುತ್ತಲಿನ ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ಜಾಥಾ ಮಾಡಿದರು.

'ಅಂತಾರಾಷ್ಟ್ರೀಯ ಸ್ವಚ್ಛತಾ ಅಭಿಯಾನ'

ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್‌ ಡಾ.ಸೆಂಥಿಲ್ ವೆಲ್ ಮಾತನಾಡಿ, ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶದಲ್ಲಿ ಅತೀ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ಹಲವಾರು ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ ಎಂದರು. ಇನ್ನು, ಮಂಗಳೂರು ಮೀನುಗಾರಿಕಾ ಕಾಲೇಜಿನ‌ ಪ್ರೊಫೆಸರ್ ಎ.ಟಿ.ರಾಮಚಂದ್ರ ನಾಯಕ್ ಮಾತನಾಡಿ, ಚೆನ್ನೈ ರಾಷ್ಟ್ರೀಯ ಕರಾವಳಿ ಸಂಶೋಧನಾ ಸಂಸ್ಥೆ ಹಾಗೂ ಭೂವಿಜ್ಞಾನ ಸಚಿವಾಲಯ ಇದರ ನಿರ್ದೇಶನದಂತೆ ಸಮುದ್ರ ಕಿನಾರೆಯಲ್ಲಿರುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ತೆಗೆದು ಸಮುದ್ರ ತೀರ ಶುಚಿಗೊಳಿಸಲಾಗಿದೆ ಎಂದರು

ABOUT THE AUTHOR

...view details