ಕರ್ನಾಟಕ

karnataka

ETV Bharat / state

ಮಂಗಳೂರು ಏರ್​ಪೋರ್ಟ್​ನಲ್ಲಿ ಅಂತಾರಾಷ್ಟ್ರೀಯ ಕಾರ್ಗೊ ಟರ್ಮಿನಲ್ ಆರಂಭ - Mangalore International Airport

ಟರ್ಮಿನಲ್​ ಕೇಂದ್ರ ಮಾನದಂಡಗಳ ಪ್ರಕಾರ ಎಲ್ಲಾ ರೀತಿಯ ಸೌಲಭ್ಯವನ್ನು ಒಳಗೊಂಡಿದೆ.

international cargo terminal started at mangalore airport
ಮಂಗಳೂರು ಏರ್​ಪೋರ್ಟ್​ನಲ್ಲಿ ಅಂತಾರಾಷ್ಟ್ರೀಯ ಕಾರ್ಗೊ ಟರ್ಮಿನಲ್ ಆರಂಭ

By

Published : May 23, 2023, 6:32 PM IST

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಕಾರ್ಗೊ ಟರ್ಮಿನಲ್ ಚಟುವಟಿಕೆ ಆರಂಭಿಸಿದ್ದು, ಇದು ವಾರ್ಷಿಕ 9 ಸಾವಿರ ಟನ್ ಸರಕುಗಳನ್ನು ನಿರ್ವಹಿಸುವ ಸಾಮರ್ಥ್ಯವುಳ್ಳದ್ದಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ (ಐಸಿಟಿ) ಸಾರ್ವಜನಿಕ ಬಳಕೆಗೆ ತೆರೆದುಕೊಂಡಿದೆ. 1,891 ಚದರ್​ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿರುವ ಐಸಿಟಿ ವಾರ್ಷಿಕ 9,000 ಟನ್ ಅಂತಾರಾಷ್ಟ್ರೀಯ ಮತ್ತು ದೇಶಿಯ ಸರಕುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸ್ಥಳೀಯ ವ್ಯಾಪಾರ ಮತ್ತು ಉದ್ಯಮಕ್ಕೆ ಇದು ಪೂರಕವಾಗುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ: ಇಲ್ಲಿ ಪಾರ್ಕಿಂಗ್ ಸಮಸ್ಯೆ ಇರುವುದಿಲ್ಲ, ಒಳಬರುವ ಮತ್ತು ಹೊರಹೋಗುವ ಸರಕುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು 10 ಟ್ರಕ್ ಬೇಗಳು, ಎರಡು ಡಾಕ್ ಲೆವೆಲ್ಲರ್​ಗಳು ಮತ್ತು ಫೋರ್ಕ್ಲಿಫ್ಟ್ ಸೌಲಭ್ಯ ಇಲ್ಲಿದೆ. ವಿಮಾನಯಾನ ಮತ್ತು ಕಸ್ಟಮ್ಸ್​ಗೆಂದೇ ಪ್ರತ್ಯೇಕ ಕಚೇರಿ ಸ್ಥಳವಿದೆ. ಕೇಂದ್ರೀಕೃತ ಎಸಿ ಹೊಂದಿರುವ ಈ ಸೌಲಭ್ಯ ವಾಯುಯಾನ ಸರಕು ನಿಯಂತ್ರಕರು ಸೂಚಿಸಿದ ಮಾನದಂಡಗಳ ಪ್ರಕಾರ ಸ್ಟ್ರಾಂಗ್ ರೂಮ್, ಕೋಲ್ಡ್ ಸ್ಟೋರೇಜ್ ಮತ್ತು ಅಪಾಯಕಾರಿ ಸರಕು ಶೇಖರಣಾ ಸೌಲಭ್ಯವನ್ನೂ ಒದಗಿಸುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಮಂಗಳೂರು ಏರ್​ಪೋರ್ಟ್​ನಲ್ಲಿ ಅಂತಾರಾಷ್ಟ್ರೀಯ ಕಾರ್ಗೊ ಟರ್ಮಿನಲ್ ಆರಂಭ

ಇದನ್ನೂ ಓದಿ:2000 ರೂ. ನೋಟ್​ ಹಿಂಪಡೆದುಕೊಂಡ ಆರ್​ಬಿಐ... ನೋಟು ಇದ್ದವರು ಹೀಗೆ ಮಾಡಿ...! ಭಯಬೇಡ - ಆರ್​ಬಿಐ ಅಭಯ

ಸಿಸಿಟಿವಿ ಕಣ್ಗಾವಲು:ಇಡೀ ಐಸಿಟಿ ಸೌಲಭ್ಯವು ಸಿಸಿಟಿವಿ ಕಣ್ಗಾವಲಿನಲ್ಲಿದೆ. ಇದು ತರಬೇತಿ, ದಾಖಲೀಕರಣ, ಸಮ್ಮೇಳನ ಮತ್ತು ಬೋರ್ಡ್ ಕೋಣೆಗೆ ಪ್ರತ್ಯೇಕ ಸ್ಥಳವನ್ನು ಹೊಂದಿದೆ. ವಿಮಾನ ನಿಲ್ದಾಣವು ಪ್ರವೇಶ ದ್ವಾರದಲ್ಲಿ ಪಾಸ್ ವಿತರಣೆ ಮತ್ತು ತಪಾಸಣೆ ಬೂತ್ ಅನ್ನು ಸಹ ಸ್ಥಾಪಿಸಿದೆ. ಈ ಸೌಲಭ್ಯ ಸಿಐಎಸ್ಎಫ್, ಎಎಸ್​ಜಿ ಸಿಬ್ಬಂದಿ ಕಣ್ಗಾವಲಿನಲ್ಲಿದೆ. ಐಸಿಟಿ 100 X 100 ಮತ್ತು 145 X185 ಎಕ್ಸ್-ರೇ ಬ್ಯಾಗೇಜ್ ತಪಾಸಣಾ ವ್ಯವಸ್ಥೆಗಳು (ಎಕ್ಸ್ಬಿಐಎಸ್ ಯಂತ್ರ) ಮತ್ತು ಸ್ವೀಕರಿಸಿದ ಮತ್ತು ರವಾನಿಸಿದ ಸರಕುಗಳನ್ನು ಪರೀಕ್ಷಿಸಲು ಸ್ಫೋಟಕ ಪತ್ತೆ ಸಾಧನಗಳನ್ನು ಹೊಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ, ಐಸಿಟಿ ಹಣ್ಣುಗಳು, ತರಕಾರಿಗಳು, ಆಹಾರ ಪದಾರ್ಥಗಳು, ಶೀತಲ/ ಹೆಪ್ಪುಗಟ್ಟಿದ ಮೀನು, ಬಿಡಿ ಭಾಗಗಳು ಮತ್ತು ಜವಳಿಗಳು ಇರುವ ಸರಕುಗಳನ್ನು ನಿರ್ವಹಿಸುತ್ತದೆ. ದೇಶೀಯವಾಗಿ, ಸರಕು ಪೋಸ್ಟ್ ಆಫೀಸ್ (ಪಿಒ) ಮೇಲ್ ಅನ್ನು ಒಳಗೊಂಡಿದೆ. ಕೊರಿಯರ್ ಐಟರ್ಮ್ಸ್, ಹಾಳಾಗುವ ವಸ್ತುಗಳು, ಬೆಲೆಬಾಳುವ ವಸ್ತುಗಳು (ಆಭರಣಗಳು), ಔಷಧಕ್ಕಾಗಿ ರಕ್ತದ ಮಾದರಿಗಳು; ಮಾನವ ಅವಶೇಷಗಳು; ದಾಖಲೆಗಳು / ಸಾಮಾನ್ಯ ಮತ್ತು ಇ-ಕಾಮರ್ಸ್ ವಸ್ತುಗಳು ಮತ್ತು ಅಪಾಯಕಾರಿ ಸರಕುಗಳು. ಪಿಒ ಮೇಲ್ ಮುಖ್ಯವಾಗಿ ಮಣಿಪಾಲ ಮೂಲದ ಭದ್ರತಾ ಮುದ್ರಣಾಲಯ ಬ್ಯಾಂಕುಗಳಿಗೆ ಚೆಕ್ ಪುಸ್ತಕಗಳು ಮತ್ತು ಇತರ ಸರ್ಕಾರಿ ಭದ್ರತಾ ದಾಖಲೆಗಳಂತಹ ವಸ್ತುಗಳನ್ನು ನಿರ್ವಹಿಸಲು ವ್ಯವಸ್ಥೆ ಇಲ್ಲಿದೆ.

ಇದನ್ನೂ ಓದಿ:ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್​ಗೆ ಡಿಜಿಸಿಎ ಅನುಮತಿ

ABOUT THE AUTHOR

...view details