ಕರ್ನಾಟಕ

karnataka

ETV Bharat / state

ಚಪ್ಪಲಿಯಲ್ಲಿ ತುಳುನಾಡಿನ ಬಾವುಟ ಎಡಿಟ್: ಬೆಂಗಳೂರಿನ ವ್ಯಕ್ತಿ ಬಂಧನ

ತುಳುನಾಡಿನ ಬಾವುಟವನ್ನು ಅವಹೇಳನಕಾರಿಯಾಗಿ ಪೋಸ್ಟ್​ ಮಾಡಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

insult-to-flag-of-tulunadu
ಬೆಂಗಳೂರಿನ ವ್ಯಕ್ತಿ ಬಂಧನ

By

Published : Jun 18, 2021, 9:24 PM IST

ಮಂಗಳೂರು:ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ಬಾವುಟಕ್ಕೆ ಅವಹೇಳನ ಮಾಡಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಶ್ರೀರಾಮಂಪುರದ ಸೂರ್ಯ ಎನ್.ಕೆ. ಎಂಬಾತ ಬಂಧಿತ ಆರೋಪಿ.

ಈತ ಚಪ್ಪಲಿಯ ಚಿತ್ರದಲ್ಲಿ ತುಳುನಾಡಿನ‌ ಬಾವುಟ ಎಡಿಟ್ ಮಾಡಿ ಅದನ್ನು ಫೇಸ್‌ಬುಕ್​ನಲ್ಲಿ ಕಮೆಂಟ್ ವೊಂದರಲ್ಲಿ ಹಾಕಿ "ಇವತ್ತು ತುಳುನಾಡ್ ಚಪ್ಪಲ್ ಬಂದಿದೆ. ನಾಳೆ ಬಿಕಿನಿಯು ಬರಬಹುದು. ಹಾಕಿಕೊಂಡು ಮಜಾ ಮಾಡಿ." ಎಂದು ಬರೆದಿದ್ದ ಎಂಬ ಆರೋಪವಿದೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಶಶಿಧರ್ ಹೆಗ್ಡೆ, ತುಳು ಬಾವುಟಕ್ಕೆ ಅಪಮಾನ ಮಾಡಿದ ಸೂರ್ಯ ಎನ್.ಕೆ. ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮಂಗಳೂರು ಪೊಲೀಸ್ ಕಮೀಷನರ್​ಗೆ ದೂರು ನೀಡಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬರ್ಕೆ ಠಾಣೆ ಪೊಲೀಸರು ಬೆಂಗಳೂರಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಈತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಓದಿ:ಕೋವಿಡ್​ ಹರಡುವಿಕೆಗೆ ಜನರ ನಿರ್ಲಕ್ಷ್ಯವೇ ಕಾರಣ: ಸಚಿವ ಡಾ.ಹರ್ಷವರ್ಧನ್

ABOUT THE AUTHOR

...view details