ಉಳ್ಳಾಲ:ಗೋವಿಗಾಗಿ ಮೇವು ಮೆರವಣಿಗೆ ಸಂದರ್ಭದಲ್ಲಿ ಪ್ರಾರ್ಥನಾ ಮಂದಿರದ ಮುಂದೆ ನಿಂತು ಅಶಾಂತಿಗೆ ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಗೋವಿಗಾಗಿ ಮೇವು ಮೆರವಣಿಗೆ ವೇಳೆ ಘರ್ಷಣೆಗೆ ಪ್ರಚೋದನೆ: ದೂರು ದಾಖಲು - ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ
ವಿನಾಕಾರಣ ಪ್ರಾರ್ಥನಾ ಮಂದಿರದ ಮುಂದೆ ವಾಹನಗಳನ್ನು ನಿಲ್ಲಿಸಿ ದುಷ್ಕೃತ್ಯ ಎಸಗಿರುವ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಆಗ್ರಹಿಸಿದೆ.
![ಗೋವಿಗಾಗಿ ಮೇವು ಮೆರವಣಿಗೆ ವೇಳೆ ಘರ್ಷಣೆಗೆ ಪ್ರಚೋದನೆ: ದೂರು ದಾಖಲು Complaint filed by Ullala Block Congress Minority Committee](https://etvbharatimages.akamaized.net/etvbharat/prod-images/768-512-16897413-thumbnail-3x2-sub.jpg)
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯಿಂದ ದೂರು ದಾಖಲು
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯಿಂದ ದೂರು ದಾಖಲು
ನ.6 ರಂದು ಸಂಜೆ ಕುತ್ತಾರು ಮದನಿ ನಗರ ಪ್ರಾರ್ಥನಾ ಮಂದಿರದ ಎದುರುಗಡೆ ವಾಹನಗಳನ್ನು ನಿಲ್ಲಿಸಿದ ಕಿಡಿಗೇಡಿಗಳು ಅವಾಚ್ಯ ಶಬ್ದಗಳಿಂದ ಬೈದು, ಬಾವುಟವನ್ನು ಪ್ರದರ್ಶಿಸಿ ಶಾಂತಿಭಂಗ ಹಾಗೂ ಘರ್ಷಣೆಗೆ ಪ್ರಚೋದಿಸಿದ್ದಾರೆ ಎಂದು ದೂರಲಾಗಿದೆ. ಕದ್ರಿ ದೇವಸ್ಥಾನದಿಂದ ಪಜೀರು ಗೋವನಿತಾಶ್ರಯದವರೆಗೆ ಗೋವಿಗಾಗಿ ಮೇವು ಕಾರ್ಯಕ್ರಮದ ಪ್ರಯುಕ್ತ ವಿಹಿಂಪ ಮೆರವಣಿಗೆ ಆಯೋಜಿಸಿತ್ತು.
ಇದನ್ನೂ ಓದಿ:ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ: ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಜನರಿಗೆ ಗಾಯ