ಕರ್ನಾಟಕ

karnataka

ETV Bharat / state

NMPTಯಲ್ಲಿ 35 ಕೋಟಿ ವೆಚ್ಚದ ಮೊಬೈಲ್ ಕಂಟೈನರ್ ಎಕ್ಸ್ ರೇ ಸ್ಕ್ಯಾನರ್ ಯಂತ್ರ ಅಳವಡಿಕೆ - Installation of Mobile Container X-Ray Scanner in NMPT

ನವ ಮಂಗಳೂರು ಬಂದರು ಟ್ರಸ್ಟ್​​ನಲ್ಲಿ 35 ಕೋಟಿ ರೂ. ವೆಚ್ಚದ ಮೊಬೈಲ್ ಕಂಟೈನರ್ ಎಕ್ಸ್ ರೇ ಸ್ಕ್ಯಾನರ್​ನ್ನು ಅಳವಡಿಕೆ ಮಾಡಲಾಗಿದೆ.

Mobile Container X-Ray Scanner
ಮೊಬೈಲ್ ಕಂಟೈನರ್ ಎಕ್ಸ್ ರೇ ಸ್ಕ್ಯಾನರ್ ಯಂತ್ರ

By

Published : Feb 3, 2021, 11:50 AM IST

ಮಂಗಳೂರು: ನಗರದಲ್ಲಿನ ನವಮಂಗಳೂರು ಬಂದರು ಟ್ರಸ್ಟ್ (NMPT) ನಲ್ಲಿ 35 ಕೋಟಿ ರೂ ವೆಚ್ಚದ ಮೊಬೈಲ್ ಕಂಟೈನರ್ ಎಕ್ಸ್ ರೇ ಸ್ಕ್ಯಾನರ್ ಅಳವಡಿಕೆ ಮಾಡಲಾಗಿದೆ.

ವಿಮಾನ ನಿಲ್ದಾಣಗಳ ಮಾದರಿಯಲ್ಲಿಯೇ ಎಲ್ಲ ದೇಶಗಳ ಬಂದರುಗಳಲ್ಲಿ ಸ್ಕ್ಯಾನಿಂಗ್ ಮಾಡಿ ಕಳುಹಿಸಬೇಕು ಎಂಬ ನಿರ್ದೇಶನದಂತೆ ಮೊಬೈಲ್ ಕಂಟೈನರ್ ಎಕ್ಸ್ ರೇ ಸ್ಕ್ಯಾನರ್ ಅಳವಡಿಸಲಾಗಿದೆ. ಈ ರೀತಿಯ ಸ್ಕ್ಯಾನರ್​​ನ್ನು ಮುಂಬಯಿ ಸೇರಿದಂತೆ ಹಲವು ಬಂದರುಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ.

ನವಮಂಗಳೂರು ಬಂದರು ಟ್ರಸ್ಟ್​​ನಲ್ಲಿ ಮೊಬೈಲ್ ಕಂಟೈನರ್ ಎಕ್ಸ್ ರೇ ಸ್ಕ್ಯಾನರ್ ಯಂತ್ರ ಅಳವಡಿಕೆ

ಎನ್​ಎಂಪಿಟಿಗೆ ಫ್ರಾನ್ಸ್​​ನಿಂದ 16 ಕೋಟಿಗೆ ಖರೀದಿಸಲಾಗಿದ್ದು, ಇದನ್ನು ಅಳವಡಿಸುವಾಗ ಒಟ್ಟು 35 ಕೋಟಿ ವೆಚ್ಚವಾಗಿದೆ. ಎನ್​ಎಂಪಿಟಿಯಲ್ಲಿ ಈ ಹಿಂದೆ ಒಂದೊಂದೇ ಪಾರ್ಸಲ್ ಬಾಕ್ಸ್​​ಗಳನ್ನು ತಪಾಸಣೆ ಮಾಡಲಾಗುತ್ತಿದ್ದರಿಂದ ಇದಕ್ಕೆ ಬಹಳಷ್ಟು ಸಮಯ ವ್ಯಯವಾಗುತ್ತಿತ್ತು. ಇದೀಗ ಅಳವಡಿಸಲಾಗಿರುವ ಸ್ಕ್ಯಾನರ್​ನಿಂದ ಕೆಲವೇ ನಿಮಿಷಗಳಲ್ಲಿ ತಪಾಸಣೆ ಮಾಡಬಹುದಾಗಿದೆ.

ಓದಿ: ರಾಜ್ಯಸಭೆ: ರೈತರ ಸಮಸ್ಯೆ ಚರ್ಚೆಗೆ ಆಡಳಿತ, ಪ್ರತಿಪಕ್ಷಗಳ ಮಧ್ಯೆ ಸಮ್ಮತಿ

ಈ ಸ್ಕ್ಯಾನರ್​​ ಈಗ ಪ್ರಾಯೋಗಿಕ ಹಂತದಲ್ಲಿದ್ದು ಮುಂದಿನ ತಿಂಗಳಲ್ಲಿ ಅಧಿಕೃತ ಕಾರ್ಯಾಚರಣೆ ಆರಂಭಿಸಲಿದೆ.

ABOUT THE AUTHOR

...view details