ಕರ್ನಾಟಕ

karnataka

ETV Bharat / state

ಕೊರೊನಾ ಪ್ರಕರಣ ಶೀಘ್ರ ಪತ್ತೆಗೆ ತಪಾಸಣಾ ವಿಧಾನ ತೀವ್ರ.. ಡಿಸಿ ಡಾ.ಕೆ ವಿ ರಾಜೇಂದ್ರ - DC Dr. K.V. Rajendra

ಒಂದು ವೇಳೆ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್​ನಲ್ಲಿ ಪಾಸಿಟಿವ್ ಬಂದು ಯಾವುದೇ ಸೋಂಕಿನ ಲಕ್ಷಣಗಳಿಲ್ಲದಿದ್ದಲ್ಲಿ ಮತ್ತು‌ ಸೋಂಕಿತರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಇನ್ನಿತರ ರೋಗಗಳಿಲ್ಲದಿದ್ದಲ್ಲಿ ಮನೆಯಲ್ಲಿಯೇ ಐಸೋಲೇಷನ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ..

‌ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
‌ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

By

Published : Aug 7, 2020, 9:52 PM IST

ಮಂಗಳೂರು :ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಶೀಘ್ರ ಪ್ರಕರಣಗಳನ್ನು ಪತ್ತೆಹಚ್ಚಲು ಹಾಗೂ ಸೋಂಕನ್ನು ನಿಯಂತ್ರಿಸುವ ಕ್ರಮವನ್ನು ಅನುಸರಿಸಲು ತಪಾಸಣಾ ವಿಧಾನಗಳನ್ನು ತೀವ್ರಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ ಆರ್‌ಟಿ-ಪಿಸಿಆರ್ ಎಂಬ ಎರಡು ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು‌ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಹೇಳಿದ್ದಾರೆ.

ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್​ ಮೂಲಕ ಯಾವುದೇ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಇದ್ದಲ್ಲಿ, ತ್ವರಿತವಾಗಿ ಪತ್ತೆ ಮಾಡಬಹುದಾಗಿದೆ. ಈ ವಿಧಾನದಲ್ಲಿ ಗಂಟಲು ದ್ರವವನ್ನು ತಪಾಸಣೆಗೊಳಪಡಿಸಿದ್ದಲ್ಲಿ 15-20 ನಿಮಿಷದೊಳಗೆ ಫಲಿತಾಂಶ ಲಭ್ಯವಾಗುತ್ತದೆ. ಈ ಪರೀಕ್ಷಾ ವಿಧಾನದಲ್ಲಿ ಸೋಂಕು ಕಂಡು ಬಂದಲ್ಲಿ ಅದು ಖಚಿತ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ನೆಗೆಟಿವ್ ಬಂದು ಕೆಲವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಮತ್ತೆ ಅವರ ಗಂಟಲು ದ್ರವ ಹಾಗೂ ಮೂಗಿನ ಸ್ರಾವದ ಮಾದರಿಯನ್ನು ತಪಾಸಣೆಗೆ ರವಾನೆ ಮಾಡಲಾಗುವುದು ಎಂದರು.

ಒಂದು ವೇಳೆ ರ‍್ಯಾಪಿಡ್ ಆ್ಯಂಟಿಜೆನ್ ಟೆಸ್ಟ್​ನಲ್ಲಿ ಪಾಸಿಟಿವ್ ಬಂದು ಯಾವುದೇ ಸೋಂಕಿನ ಲಕ್ಷಣಗಳಿಲ್ಲದಿದ್ದಲ್ಲಿ ಮತ್ತು‌ ಸೋಂಕಿತರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಇನ್ನಿತರ ರೋಗಗಳಿಲ್ಲದಿದ್ದಲ್ಲಿ ಮನೆಯಲ್ಲಿಯೇ ಐಸೋಲೇಷನ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಇನ್ನಿತರ ರೋಗಗಳಿದ್ದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೊರೊನಾ ರೋಗಿಗಳನ್ನು ದಾಖಲು ಮಾಡುವ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಇಲಾಖೆಯಿಂದ ರ‍್ಯಾಪಿಡ್ ಆ್ಯಂಟಿಜೆನ್ ಕಿಟ್ ನೀಡಲಾಗುತ್ತದೆ. ‌ಈ ಕಿಟ್‌ಗಳ ಮೂಲಕ ಸೋಂಕಿತರಿಗೆ ತ್ವರಿತ ತಪಾಸಣೆ ಮಾಡಲಾಗುತ್ತದೆ. ಆರ್‌ಟಿ-ಪಿಸಿಆರ್ ಪರೀಕ್ಷಾ ವಿಧಾನದಲ್ಲಿ ಸೋಂಕಿತರ ಗಂಟಲು ದ್ರವ ಹಾಗೂ ಮೂಗಿನ‌ ಸ್ರಾವವನ್ನು ತಪಾಸಣೆ ಮಾಡಲಾಗುತ್ತದೆ. ಇದರ ಫಲಿತಾಂಶ ಲಭ್ಯವಾಗಲು 24 ಗಂಟೆಗಳ ಅವಧಿ ಬೇಕಾಗುತ್ತದೆ‌. ಎಪ್ರಿಲ್‌ 30ರೊಳಗೆ ಜಿಲ್ಲಾ ಸರ್ವೇಕ್ಷಣಾ ಘಟಕ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿಯೂ ಆರ್‌ಟಿ-ಪಿಸಿಆರ್ ಲ್ಯಾಬ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಹೇಳಿದರು.

ABOUT THE AUTHOR

...view details