ಕರ್ನಾಟಕ

karnataka

ETV Bharat / state

ಈ ಮಹಿಳೆಗಿಲ್ಲ 'ರೇಷನ್' ಕಾರ್ಡ್​, ವಿದ್ಯುತ್ ಸಂಪರ್ಕ... 'ಶೌಚಾಲಯ'ವಂತೂ ಕನಸೇ! - ಓಂತ್ರಡ್ಕದ ಮಾಣಿಗೊ ಎಂಬ ವಿಧವೆ

ಸ್ವಚ್ಛ ಭಾರತ ನಿರ್ಮಾಣವಾಗಬೇಕಾದರೆ ದೇಶದಲ್ಲಿ ಬಯಲು ಮುಕ್ತ ಶೌಚಾಲಯ ನಿರ್ಮಾಣವಾಗಬೇಕು ಎಂದು ಹತ್ತು ಹಲವು ಯೋಜನೆಗಳನ್ನು ತಂದರೂ ಬಡವರಿಗೆ ತಲುಪುವುದಿಲ್ಲ ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ವೃದ್ಧೆಯೊಬ್ಬರ ಕರುಣಾಜನಕ ಕಥೆ ಸಾಕ್ಷಿಯಾಗುತ್ತೆ. ಪುಟ್ಟ ಗುಡಿಸಲಿನಲ್ಲಿರುವ ಈ ವಿಧವೆಗೆ ರೇಷನ್​ ಕಾರ್ಡ್​, ವಿದ್ಯುತ್​ ಸಂಪರ್ಕ ಸೇರಿದಂತೆ ಮೂಲ ಸೌಲಭ್ಯಗಳು ಸಿಗದಿರುವುದು ವಿಪರ್ಯಾಸ.

Infrastructure problems faced by a old women at kadaba
ವಿಧವೆ ಮಹಿಳೆ

By

Published : May 15, 2020, 7:45 PM IST

ಕಡಬ: ತಾಲೂಕಿನ ಕೋಡಿಂಬಾಳ ಗ್ರಾಮದ (ಕಡಬ ಗ್ರಾ.ಪಂ ನ ವಾರ್ಡ್​ ಸಂಖ್ಯೆ 2) ಓಂತ್ರಡ್ಕದ ಮಾಣಿಗೊ ಎಂಬ ವಿಧವೆ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ತಾಯಿ ಮತ್ತು ಮಗ ಇಬ್ಬರು ವಾಸವಿರುವ ಇವರಿಗೆ ಶೌಚಾಲಯವಿಲ್ಲದೆ ಇವರಿಗೆ ಇಂದಿಗೂ ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ.

ಸ್ವಚ್ಛ ಭಾರತ ನಿರ್ಮಾಣವಾಗಬೇಕಾದರೆ ದೇಶದಲ್ಲಿ ಬಯಲು ಮುಕ್ತ ಶೌಚಾಲಯ ನಿರ್ಮಾಣವಾಗಬೇಕು ಎಂದು ಹತ್ತು ಹಲವು ಯೋಜನೆಗಳನ್ನು ತಂದರೂ ಬಡವರಿಗೆ ತಲುಪುವುದಿಲ್ಲ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ.

ವಿಧವೆ ಮಹಿಳೆಯ ಮನೆ

ವಿದ್ಯುತ್ ಸಂಪರ್ಕವಿಲ್ಲ, ರೇಷನ್ ಕಾರ್ಡೂ ಇಲ್ಲ: ಚುನಾವಣಾ ಸಮಯ ಬಂದಾಗ ಭರವಸೆಗಳನ್ನು ನೀಡಿ ಹೋಗಿದ್ದ ಈ ಭಾಗದ ಸ್ಥಳೀಯ ಜನಪ್ರತಿನಿಧಿಗಳು ತಿರುಗಿ ಬಾರದೆ ವರ್ಷಗಳೇ ಕಳೆದಿವೆ. ಹಲವು ಕಡೆಗಳಲ್ಲಿ ಗ್ರಾ.ಪಂ ಸದಸ್ಯರ ಮುಂದಾಳತ್ವದಲ್ಲಿ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದ್ದರೂ, ಇಲ್ಲಿನ ಗ್ರಾ.ಪಂ ಸದಸ್ಯರು ಚುನಾಯಿತರಾಗಿ ಐದು ವರ್ಷವಾದರೂ ಈ ಭಾಗಕ್ಕೆ ಒಂದು ಬಾರಿಯೂ ಭೇಟಿ ನೀಡದಿರುವುದು ವಿಪರ್ಯಾಸ.

ಈ ಗುಡಿಸಲಿಗೆ ವಿದ್ಯುತ್ ಸಂಪರ್ಕವಿಲ್ಲ, ರೇಷನ್ ಕಾರ್ಡ್​ ಇದ್ದದ್ದು ಮಾಹಿತಿ ಕೊರತೆಯಿಂದಾಗಿ ರದ್ದಾಗಿದೆ. ಇಲ್ಲಿನ ಗ್ರಾ.ಪಂ ಸದಸ್ಯೆ ಕನಿಷ್ಠ ಮನೆಗಳಿಗೆ ಭೇಟಿ ಮಾಡಿ ಮಾಹಿತಿ ನೀಡುವುದಾಗಲಿ, ವಿಚಾರಿಸುವ ಸೌಜನ್ಯವನ್ನೂ ತೋರಿತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ABOUT THE AUTHOR

...view details