ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ಹಲವಾರು ಅಹಿತಕರ ಘಟನೆಗಳು ನಡೆದಿವೆ. ಜರುಗಿದ ಎಲ್ಲಾ ಘಟನೆಗಳ ಬಗ್ಗೆ ವರದಿಯನ್ನು ವಾರದೊಳಗೆ ನೀಡಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದಂತೆ ನೋಡಿಕೊಳ್ಳಬೇಕು. ಸಮಾಜಘಾತುಕ ಶಕ್ತಿಗಳ ಬಗ್ಗೆ ವಿಶೇಷ ನಿಗಾ ಇರಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಗೋವು ಮಾರಟ ಮತ್ತು ಖರೀದಿಯ ಬಗ್ಗೆ ಪೊಲೀಸರಿಗೆ ತಿಳಿಸಿ: ಸಚಿವ ಖಾದರ್
ಅಕ್ರಮ ಗೋ ಸಾಗಾಟ ಮಾಡಲಾಗಿದೆ ಎಂದು ಹಲ್ಲೆ ಮಾಡಿ ಸಮಾಜದ ಶಾಂತಿಯನ್ನು ಕೆಡಿಸಬಾರದು. ಗೋವುಗಳನ್ನು ಕೊಳ್ಳುವಾಗ ಮತ್ತು ಮಾರಾಟ ಮಾಡುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಸಂದರ್ಭ ಪೊಲೀಸರು ಗೋವುಗಳ ಸಾಗಾಟಕ್ಕೆ ಸೂಕ್ತ ರಕ್ಷಣೆ ನೀಡಲಿದ್ದಾರೆ ಎಂದು ಸಲಹೆ ನೀಡಿದ ಉಸ್ತುವಾರಿ ಸಚಿವ ಯು.ಟಿ.ಖಾದರ್.
ದ.ಕ. ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಕುರಿತು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಖಾದರ್, ಅಕ್ರಮ ಗೋ ಸಾಗಾಟದಿಂದ ಜಿಲ್ಲೆಯಲ್ಲಿ ಬಹಳಷ್ಟು ಅಹಿತಕರ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಗೋವುಗಳ ಮಾರಾಟ ಹಾಗೂ ಅದನ್ನು ಖರೀದಿಸುವ ಮುನ್ನ ಸಂಬಧಪಟ್ಟವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಸಾಗಾಟ ಮಾಡಬೇಕು ಎಂದು ಸಲಹೆ ನೀಡಿದರು.
ಅಕ್ರಮ ಗೋ ಸಾಗಾಟ ಮಾಡಲಾಗಿದೆ ಎಂದು ಹಲ್ಲೆ ಮಾಡಿ ಸಮಾಜದ ಶಾಂತಿಯನ್ನು ಕೆಡಿಸಬಾರದು. ಗೋವುಗಳನ್ನು ಕೊಳ್ಳುವಾಗ ಮತ್ತು ಮಾರಾಟ ಮಾಡುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಸಂದರ್ಭ ಪೊಲೀಸರು ಗೋವುಗಳ ಸಾಗಾಟಕ್ಕೆ ಸೂಕ್ತ ರಕ್ಷಣೆ ನೀಡಲಿದ್ದಾರೆ. ಇದರಿಂದ ಸಂಭವಿಸುವ ಹಲ್ಲೆ, ದೌರ್ಜನ್ಯವೂ ಕಡಿಮೆಯಾಗಲಿದೆ ಎಂದು ಖಾದರ್ ಹೇಳಿದರು.