ಮಂಗಳೂರು(ದಕ್ಷಣ ಕನ್ನಡ): ಇಂಡಿಗೋ ಸಂಸ್ಥೆಯು ಇಂದಿನಿಂದ (ಜನವರಿ 27) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ದೈನಂದಿನ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಇಂಡಿಗೋ ಮೊದಲ ಪ್ರಯಾಣವು ವಿಮಾನ ( 6e 6303) ದೆಹಲಿಯಿಂದ ಇಂದು ಮಧ್ಯಾಹ್ನ 2.55 ಗೆ ಹೊರಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವನ್ನು ಸಂಜೆ 6.05ಗೆ ತಲುಪಿದೆ.
ವಿಮಾನ (6E 6304) ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 6.35ಕ್ಕೆ ಹೊರಟು ರಾತ್ರಿ 9.35ಕ್ಕೆ ದೆಹಲಿ ತಲುಪುತ್ತದೆ. ಮಂಗಳೂರಿನಿಂದ ಹೊರಟ ವಿಮಾನ (6E 6304 )ವು ಇಂದು 147 ಪ್ರಯಾಣಿಕರನ್ನು ದೆಹಲಿಗೆ ಕೊಂಡೊಯ್ದಿದೆ. ನಾಳೆ (ಜನವರಿ 28 ) ವಿಮಾನ 170 ಪ್ರಯಾಣಿಕರನ್ನು ಕೊಂಡೊಯ್ಯಲಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಆರಂಭವಾದ ರನ್‌ವೇ ರಿ-ಕಾರ್ಪೆಟಿಂಗ್ ಕಾರ್ಯದಿಂದಾಗಿ ಸಂಜೆ 6 ರಿಂದ 9.30 ರವರೆಗೆ (ಸೋಮ-ಶನಿ) ಪರಿಷ್ಕೃತ ಕಾರ್ಯಾಚರಣೆಯ ಸಮಯದ ಚೌಕಟ್ಟಿನಲ್ಲಿ ಇಂಡಿಗೋ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ.
ಮಂಗಳೂರಿನಿಂದ ಬೆಂಗಳೂರಿನ ಮೂಲಕ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ 6E 172 ವಿಮಾನವು ರೀ ಕಾರ್ಪೆಟಿಂಗ್ ಕಾರ್ಯದಿಂದಾಗಿ ಇನ್ನೂ ಭಾನುವಾರದಂದು ಮಾತ್ರ ಕಾರ್ಯನಿರ್ವಹಿಸಲಿದೆ. ಭಾನುವಾರದಂದು ಈ ವಿಮಾನವು ಮಂಗಳೂರಿನಿಂದ ಮಧ್ಯಾಹ್ನ 12.15 ಕ್ಕೆ ಹೊರಟು 1.20 ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಬೆಂಗಳೂರಿನಿಂದ ಈ ವಿಮಾನವು ಮಧ್ಯಾಹ್ನ 2 ಗಂಟೆಗೆ ಹೊರಡಲಿದ್ದು, ಸಂಜೆ 4.35ಕ್ಕೆ ಕೋಲ್ಕತ್ತಾ ತಲುಪಲಿದೆ.