ಬಂಟ್ವಾಳ (ದ.ಕ): ತಾಲೂಕಿನ ಮಣಿನಾಲ್ಕೂರು ಗ್ರಾ.ಪಂ ಕಚೇರಿಯಲ್ಲಿ ರಾಷ್ಟ್ರಧ್ವಜ ತಲೆಕೆಳಗಾಗಿ ರಾತ್ರಿಯವರೆಗೂ ಹಾರಾಡಿದ ಘಟನೆ ನಡೆದಿದೆ. ಈ ಕುರಿತು ಸ್ಥಳೀಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಗ್ರಾ.ಪಂ ಎಡವಟ್ಟು: ತಲೆಕೆಳಗಾಗಿ ತಡರಾತ್ರಿವರೆಗೂ ಹಾರಾಡಿದ ರಾಷ್ಟ್ರಧ್ವಜ - Bantawala Countryside Police Station
ಸ್ವಾತಂತ್ರ್ಯೋತ್ಸವ ಹಿನ್ನೆಲೆ ಇಲ್ಲಿನ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿ ಎಡವಟ್ಟು ಮಾಡಿದ್ದಲ್ಲದೇ , ತಡರಾತ್ರಿವರೆಗೂ ಧ್ವಜ ಇಳಿಸಿದೇ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ.
ಗ್ರಾಮಪಂಚಾಯಿತಿ ಯಡವಟ್ಟು: ತಲೆಕೆಳಗಾಗಿ ತಡರಾತ್ರಿವರೆಗೂ ಹಾರಾಡಿದ ರಾಷ್ಟ್ರಧ್ವಜ
ಈ ವೇಳೆ ಪಂಚಾಯಿತಿ ಆವರಣದಲ್ಲಿ ಸ್ಥಳೀಯರು ಜಮಾಯಿಸುತ್ತಿದ್ದಂತೆ ಮಾಹಿತಿ ಪಡೆದ ಪಂಚಾಯತ್ ಸಿಬ್ಬಂದಿಯೊಬ್ಬರು ಅಗಮಿಸಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಂಚಾಯತ್ನ ಸಿಬ್ಬಂದಿಯೊಬ್ಬರಿಗೆ ನಿತ್ಯ ರಾಷ್ಟ್ರಧ್ವಜ ಹಾರಿಸುವ ಜವಾಬ್ದಾರಿ ನೀಡಲಾಗಿದೆ. ಆದರೆ, ನೀರು ಸರಬರಾಜು ಮಾಡುತ್ತಿರುವಾತ ಈ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.