ಮಂಗಳೂರು: ಭಾರತೀಯ ಹಸಿರು ಉತ್ಪಾದನಾ ಚಾಲೆಂಜ್ 2019ರಲ್ಲಿ ಮಂಗಳೂರಿನ ಎಂಆರ್ಪಿಎಲ್ ಬೆಳ್ಳಿ ಪದಕಕ್ಕೆ ಆಯ್ಕೆಯಾಗಿದೆ.
ಭಾರತೀಯ ಹಸಿರು ಉತ್ಪಾದನಾ ಚಾಲೆಂಜ್ನಲ್ಲಿ ಎಂಆರ್ಪಿಎಲ್ಗೆ ಬೆಳ್ಳಿ ಪದಕ - mangalore
ಇಂಟರ್ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನ್ಯುಫ್ಯಾಕ್ಚರಿಂಗ್ (ಐಆರ್ಐಎಂ) ಸಂಸ್ಥೆ ನೀಡುವ ಭಾರತೀಯ ಹಸಿರು ಉತ್ಪಾದನಾ ಚಾಲೆಂಜ್ 2019ರಲ್ಲಿ ಮಂಗಳೂರಿನ ಎಂಆರ್ಪಿಎಲ್ ಬೆಳ್ಳಿ ಪದಕಕ್ಕೆ ಭಾಜನವಾಗಿದೆ.
ಇಂಟರ್ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಮ್ಯಾನ್ಯುಫ್ಯಾಕ್ಚರಿಂಗ್ (ಐಆರ್ಐಎಂ) ಸಂಸ್ಥೆ ನೀಡುವ ಈ ಪ್ರಶಸ್ತಿಯನ್ನು 2017ರಲ್ಲಿಯೂ ಎಂಆರ್ಪಿಎಲ್ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿತ್ತು. ಈ ಸ್ಪರ್ಧೆಯು ಉನ್ನತ ದರ್ಜೆಯ ಉತ್ಪಾದನಾ ಸಂಸ್ಥೆಗಳ ನಡುವೆ ನಡೆಯುತ್ತಿದ್ದು, ಪರಿಸರ ಸ್ನೇಹಿ ಚಟುವಟಿಕೆಗಳಿಗಾಗಿ ಎಂಆರ್ಪಿಎಲ್ ಈ ಪ್ರಶಸ್ತಿಗೆ ಭಾಜನವಾಗಿದೆ.
ಐಆರ್ಐಎಂ ಸಂಸ್ಥೆಯು ಕೈಗಾರಿಕೆಗಳಲ್ಲಿ ಪರಿಸರಮುಖಿ ತಾಂತ್ರಿಕತೆಯನ್ನು ಅಳವಡಿಸಲು ಪ್ರೆರೇಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಇದರ ಭಾಗವಾಗಿ ಭಾರತೀಯ ಹಸಿರು ಉತ್ಪಾದನಾ ಚಾಲೆಂಜ್ ಪ್ರಶಸ್ತಿಯನ್ನು ನೀಡುತ್ತದೆ. ಈ ಪ್ರಶಸ್ತಿಯನ್ನು ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರದಾನ ಮಾಡಲಾಗುತ್ತದೆ.