ಕರ್ನಾಟಕ

karnataka

ETV Bharat / state

ತಾಯಿಯನ್ನು ದೇವರು ಎಂದು ಗೌರವಿಸುವ ದೇಶ ಭಾರತ: ಶಾಸಕ ಹರೀಶ್ ಪೂಂಜಾ - ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ

ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗ್ಯಲಕ್ಷ್ಮೀ ಯೋಜನೆಯ ಮೂಲಕ ನಿರಂತರವಾಗಿ ಒಂದು ಲಕ್ಷ ರೂ. ಖಾತೆಗೆ ಜಮಾಗೊಳಿಸಿ ಹೆಣ್ಣು ಮಕ್ಕಳಿಗೆ ಶಕ್ತಿ ನೀಡುತ್ತಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

MLA Harish Poonja

By

Published : Sep 19, 2020, 8:45 AM IST

ಬೆಳ್ತಂಗಡಿ: ತಾಯಿಯನ್ನು ದೇವರು ಎಂದು ಗೌರವಿಸುವ ದೇಶವೊಂದಿದ್ದರೆ ಅದು ಭಾರತ. ಇದಕ್ಕೆ ಪೂರಕವಾಗಿ ಹೆಣ್ಣುಮಕ್ಕಳು ನಿಶ್ಚಿಂತೆಯಿಂದ ಜೀವನ ನಡೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಅದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಗ್ಯಲಕ್ಷ್ಮೀ ಯೋಜನೆಯ ಮೂಲಕ ನಿರಂತರವಾಗಿ ಒಂದು ಲಕ್ಷ ರೂ. ಖಾತೆಗೆ ಜಮಾಗೊಳಿಸುವ ಮೂಲಕ ಹೆಣ್ಣು ಮಕ್ಕಳಿಗೆ ಶಕ್ತಿ ನೀಡುತ್ತಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

ತಾಯಿಯನ್ನು ದೇವರು ಎಂದು ಗೌರವಿಸುವ ದೇಶ ಭಾರತ: ಶಾಸಕ ಹರೀಶ್ ಪೂಂಜಾ

ಶುಕ್ರವಾರ ಮಂಜುನಾಥ ಕಲಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ ಇದರ ವತಿಯಿಂದ 520 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಹಾಗೂ ಪೋಷಣ್​​ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಪ್ರೀಯಾ ಆಗ್ನೇಸ್ ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ನಮ್ಮ ಎಲ್ಲಾ ಸಿಬ್ಬಂದಿ ಮಾಡುತ್ತಿದ್ದಾರೆ. ಜೊತೆಗೆ ಕಾರ್ಯಕ್ರಮಗಳ ಮಾಹಿತಿಯನ್ನು ನೀಡುವ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ABOUT THE AUTHOR

...view details