ಬೆಳ್ತಂಗಡಿ, ದಕ್ಷಿಣಕನ್ನಡ:ಖಾಸಗಿ ಕಾಲೇಜೊಂದರ ಆವರಣದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಅಶ್ಲೀಲವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕಾಲೇಜು ಆಡಳಿತ ಮಂಡಳಿ ಈ ಇಬ್ಬರೂ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. ಈ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಕಾಲೇಜು ಆವರಣದಲ್ಲಿ ಯುವಕ-ಯುವತಿಯಿಂದ ಅಶ್ಲೀಲ ವರ್ತನೆ ಆರೋಪ, ಅಮಾನತು - ವಿದ್ಯಾರ್ಥಿಗಳು ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸಿ
ಕಾಲೇಜು ಅವರಣದಲ್ಲಿ ಯುವಕ ಮತ್ತು ಯುವತಿ ಆಶ್ಲೀಲವಾಗಿ ವರ್ತಿಸಿರುವ ಆರೋಪ ಹಿನ್ನೆಲೆ ಅವರಿಬ್ಬರನ್ನು ಕಾಲೇಜು ಮಂಡಳಿ ಅಮಾನತು ಮಾಡಿ ಆದೇಶಿಸಿದೆ.

ಕಾಲೇಜು ಆವರಣದಲ್ಲಿ ಅನ್ಯಕೋಮಿನ ವಿದ್ಯಾರ್ಥಿಗಳಿಂದ ಅಶ್ಲೀಲ ವರ್ತನೆ, ಅಮಾನತು
ಡಿಸೆಂಬರ್ 17 ರಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿದ ನಂತರ ಸ್ಥಳೀಯ ಕಾಲೇಜಿನ ಯುವಕ ಮತ್ತು ಯುವತಿ ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳಾಗಿ ಆಕ್ರೋಶ ವ್ಯಕ್ತವಾಗಿತ್ತು. ನಂತರ ಕಾಲೇಜು ಆಡಳಿತ ಮಂಡಳಿಗೆ ವಿಚಾರ ತಿಳಿದು ಇಬ್ಬರು ವಿದ್ಯಾರ್ಥಿಗಳನ್ನು ಅಶಿಸ್ತಿನ ವರ್ತನೆಗಾಗಿ ಅಮಾನತು ಮಾಡಿದೆ ಎಂದು ತಿಳಿದು ಬಂದಿದೆ.
Last Updated : Dec 24, 2022, 10:27 AM IST