ಮಂಗಳೂರು:ಕೊರೊನಾ ವೈರಸ್ ಹಾವಳಿ ಬಳಿಕ ರಕ್ತದಾನ ಮಾಡಲು ದಾನಿಗಳು ಮುಂದೆ ಬರುತ್ತಿರಲಿಲ್ಲ. ಆದ್ರೀಗ ಪರಿಸ್ಥಿತಿ ಬದಲಾಗಿದೆ. ವೈರಸ್ ಹಾವಳಿ ಕಡಿಮೆಯಾಗದಿದ್ದರೂ ಇದೀಗ ದಾನಿಗಳಲ್ಲಿ ಮಾತ್ರ ಹಿಂಜರಿಕೆ ಕಡಿಮೆಯಾಗಿದೆ.
ಪರರ ಜೀವ ಉಳಿಸಲು ರಕ್ತದಾನ ಮಾಡುವ ಹಲವು ಮಂದಿ ದಾನಿಗಳು ನಿಯಮಿತವಾಗಿ ರಕ್ತದಾನ ಮಾಡುತ್ತಲೇ ಇರುತ್ತಾರೆ. ಕೊರೊನಾ ವೈರಸ್ ಹಾವಳಿ ಬಳಿಕ ರಕ್ತದಾನಿಗಳಲ್ಲಿ ಕೊಂಚ ಭಯ ಸೃಷ್ಟಿಯಾಗಿ ರಕ್ತದಾನ ಮಾಡುವ ವೇಳೆ ವೈರಸ್ ತಮಗೂ ತಗುಲಬಹುದೆಂಬ ಆತಂಕ ಆವರಿಸಿತ್ತು. ಕೊರೊನಾ ಪ್ರಕರಣ ಇಳಿಮುಖವಾಗದಿದ್ದರೂ ಇದೀಗ ವೈರಸ್ ಮೇಲಿನ ಭಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಅದಕ್ಕೆ ಸೂಕ್ತ ಉದಾಹರಣೆಯಂತೆ, ಮಂಗಳೂರಿನ ಬ್ಲಡ್ ಬ್ಯಾಂಕ್ ಗಳಲ್ಲಿ ಇದೀಗ ಅವಶ್ಯಕತೆಗೆ ಬೇಕಾದಷ್ಟು ರಕ್ತದ ಸಂಗ್ರಹಗಳು ಲಭ್ಯ ಇವೆ.