ಮಂಗಳೂರು:ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ' ಸಿನಿಮಾ ಸಾಕಷ್ಟು ಸದ್ದು ಮಾಡಿರೋದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಈ ಸಿನಿಮಾದ ಶ್ರೀವಲ್ಲಿ ಹಾಡು ಹಾಗೂ ಅದರ ಸ್ಟೆಪ್ ಅಂತೂ ಸಖತ್ ಫೇಮಸ್. ಈ ಹಾಡು ಹಾಗೂ ಸ್ಟೆಪ್ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಇದೀಗ ಯಕ್ಷಗಾನದಲ್ಲೂ ಇದು ಕೇಳಿ ಬಂದಿದೆ.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಈ ಶ್ರೀವಲ್ಲಿ ಹಾಡು ಕೇಳಿಬಂದಿದೆ. ಅಷ್ಟೇ ಅಲ್ಲದೆ ಯಕ್ಷಗಾನದ ಹಾಸ್ಯ ಪಾತ್ರಧಾರಿ ಸಿನಿಮಾದಲ್ಲಿ ಈ ಹಾಡಿಗೆ ಅಳವಡಿಸಲಾದ ಡಿಫರೆಂಟ್ ಸ್ಟೆಪ್ನ್ನು ಹಾಕಿದ್ದಾರೆ. ಇದಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ರಂಗದಲ್ಲಿ ಕಲಾವಿದರು ನಗುವ ದೃಶ್ಯ ಕಂಡುಬಂದಿದೆ.