ಕರ್ನಾಟಕ

karnataka

ETV Bharat / state

ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸಾಧನೆ ಶೂನ್ಯ: ಎನ್.ಎ.ಹ್ಯಾರಿಸ್​​​ - ನೋಟ್ ಬ್ಯಾನ್

ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಸಾಧನೆ ಶೂನ್ಯ. ನೋಟ್ ಬ್ಯಾನ್ ಮಾಡಿದವರು ಬಿಜೆಪಿಯವರು. ಯುವಕರು ಮೋದಿ ಜಪ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಯುವಕರಿಗೆ ಏನೂ ಮಾಡಿಲ್ಲ ಎಂದು ಶಾಸಕ ಎನ್.ಎ.ಹ್ಯಾರೀಸ್ ಟೀಕಿಸಿದರು.

ಬೆಂಗಳೂರು ಶಾಸಕ ಎನ್.ಎ.ಹ್ಯಾರೀಸ್

By

Published : Apr 6, 2019, 5:36 PM IST

ಮಂಗಳೂರು:ಬಿಜೆಪಿಯವರು ಕಾಂಗ್ರೆಸ್ 60 ವರ್ಷಗಳಲ್ಲಿ ಈ ದೇಶಕ್ಕೆ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಇತ್ತು ಏನು ಮಾಡಿತು. ಅವರ ಸಾಧನೆ ಶೂನ್ಯ ಎಂದು ಬೆಂಗಳೂರು ಶಾಸಕ ಎನ್.ಎ.ಹ್ಯಾರೀಸ್ ಹೇಳಿದರು.

ಬೆಂಗಳೂರು ಶಾಸಕ ಎನ್.ಎ.ಹ್ಯಾರೀಸ್

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೋಟ್ ಬ್ಯಾನ್ ಮಾಡಿದರು, ಜಿಎಸ್​ಟಿ ತಂದರು, ನಗರಗಳ ಹೆಸರು ಬದಲಾವಣೆ ಮಾಡಿದರು. ಅದರಿಂದ ಈ ದೇಶಕ್ಕೆ ಏನಾಯಿತು? ಜಾತಿ, ಧರ್ಮ ಎಂಬುವುದು ವೈಯುಕ್ತಿಕ. ಜಾತಿ ರಾಜಕಾರಣ ಈ ದೇಶಕ್ಕೆ ಮಾರಕ. ಭಾರತ ದೇಶ ನಮ್ಮದು ಎಂಬ ನೆಲೆಯಲ್ಲಿ ನಾವು ಮುಂದುವರಿಯಬೇಕು ಎಂದರು.

ಯುವಕರು ಮೋದಿ ಜಪ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಯುವಕರಿಗೆ ಏನೂ ಮಾಡಿಲ್ಲ. ಮೋದಿ ಸರ್ಕಾರದ ರಫೇಲ್​​ ಹಗರಣದ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಎಂದು ನೇರವಾಗಿ ಹೇಳಿದ್ದಾರೆ. ನೀವು ಚೋರ್ ಅಲ್ಲದಿದ್ದರೆ ಸಿಬಿಐ ಅಧಿಕಾರಿಯನ್ನು ಯಾಕೆ ರಾತ್ರೋರಾತ್ರಿ ವರ್ಗಾವಣೆ ಮಾಡುತ್ತೀರಿ. ಕೋರ್ಟ್ ಅವರನ್ನು ಅಲ್ಲಿಗೇ ಕಳಿಸಿದ್ದರೆ ನೀವು ಮತ್ತೆ ಬೇರೆ ಕಡೆಗೆ ವರ್ಗಾವಣೆ ಮಾಡಿ ಫೈಲ್ ಕಳೆದು ಹೋಗಿದೆ ಎಂಬ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಇದರ ಸತ್ಯಾಂಶ ಬೆಳಕಿಗೆ ಬಂದೇ ಬರುತ್ತದೆ ಎಂದು ಟೀಕಿಸಿದರು.

ABOUT THE AUTHOR

...view details