ಸುಬ್ರಹ್ಮಣ್ಯ (ದಕ್ಷಿಣಕನ್ನಡ): ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಕುಮಾರಧಾರ ಸ್ನಾನಘಟ್ಟವು ಮುಳುಗಿದ್ದು, ಪಂಜ-ಪುತ್ತೂರು, ಕಡಬ-ಪಂಜ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಕುಮಾರಧಾರ ನದಿಯು ಅಪಾಯಮಟ್ಟವನ್ನು ಮೀರಿ ಹರಿಯುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಸ್ನಾನಘಟ್ಟ ಮುಳುಗಡೆಯಾಗಿತ್ತು.
ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಪಂಜ - ಪುತ್ತೂರು ರಸ್ತೆಯು ಮುಳುಗಡೆಯಾಗಿದ್ದು, ಅದೇ ರೀತಿ ಕಡಬದಿಂದ ಪಂಜ ಸಂಪರ್ಕಿಸುವ ರಸ್ತೆಯ ಪುಳಿಕುಕ್ಕು ಎಂಬಲ್ಲಿ ರಾಜ್ಯ ಹೆದ್ದಾರಿಯು ನೆರೆ ನೀರಿನಿಂದಾಗಿ ಸಂಪರ್ಕ ಕಡಿತಗೊಂಡಿದೆ.