ಮಂಗಳೂರು: ಸೂಕ್ತ ದಾಖಲೆಗಳಿಲ್ಲದೇ ದೇಶದೊಳಗೆ ಅಕ್ರಮ ಪ್ರವೇಶ ಮಾಡಿರುವ ಬಾಂಗ್ಲಾ ಪ್ರಜೆಗೆ ಮೂಡುಬಿದಿರೆ ಜೆ.ಎಂ.ಎಫ್.ಸಿ ನ್ಯಾಯಾಲಯ 2 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಬಾಂಗ್ಲಾ ದೇಶದ ಪ್ರಜೆ ದುಲಾಲ್ ಬೈರಾಗಿ ಅಕ್ರಮ ವಲಸಿಗ ಶಿಕ್ಷೆಗೊಳಗಾದ ಆರೋಪಿ. ದುಲಾಲ್ ಬೈರಾಗಿ ಮೂಡಬಿದಿರೆ ತಾಲೂಕಿನ ಇರುವೈಲು ಎಂಬಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಮೂಡುಬಿದಿರೆ ಪೊಲೀಸರು ಈತನನ್ನು ಬಂಧಿಸಿದ್ದರು. ಮೂಡಬಿದಿರೆ ಸಹಾಯಕ ಠಾಣಾಧಿಕಾರಿ ವಿನಾಯಕ ಬಾವಿಕಟ್ಟೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.