ಕರ್ನಾಟಕ

karnataka

ETV Bharat / state

ಪುತ್ತೂರಲ್ಲಿ ಪತ್ರಕರ್ತರ ಸಾಮಾಜಿಕ ಕುಟುಂಬ ಭದ್ರತಾ ಯೋಜನೆ ಅನುಷ್ಠಾನ

ಕೆಲ ವರ್ಷಗಳ ಹಿಂದೆ ಪುತ್ತೂರು ತಾಲೂಕು ಪತ್ರಕರ್ತರ ಸಂಘ ತನ್ನ ಸದಸ್ಯರ ತುರ್ತು ಆರೋಗ್ಯಕ್ಕಾಗಿ ಕ್ಷೇಮನಿಧಿ ಎಂಬ ಯೋಜನೆ ಜಾರಿಗೊಳಿಸಿತ್ತು. ಆರೋಗ್ಯ ಸಮಸ್ಯೆಗಳು ಉಂಟಾದಾಗ ಈ ನಿಧಿಯಿಂದ ನೆರವು ಪಡೆದುಕೊಂಡರು. ಆದರೆ ಈ ಕ್ಷೇಮ ನಿಧಿಯಲ್ಲಿ ಕುಟುಂಬ ಭದ್ರತೆಗೆ ಅವಕಾಶ ಇಲ್ಲವಾಗಿತ್ತು. ಹೀಗಾಗಿ, ಸಾಮಾಜಿಕ ಭದ್ರತಾ ಯೋಜನೆ ಜಾರಿಗೆ ತರಲಾಗಿದೆ.

By

Published : Dec 14, 2020, 7:33 PM IST

puttur
ಪುತ್ತೂರು ಪತ್ರಿಕಾಭವನ

ಪುತ್ತೂರು: ಪತ್ರಕರ್ತರ ಕುಟುಂಬ ಭದ್ರತೆಗೆ ಶಾಶ್ವತ ಯೋಜನೆಯೊಂದನ್ನು ಪುತ್ತೂರು ತಾಲೂಕು ಪತ್ರಕರ್ತರ ಸಂಘ ಅನುಷ್ಠಾನಗೊಳಿಸಿದೆ.

ಸಂಘದ ಪ್ರತಿ ಸದಸ್ಯರ ಹೆಸರಲ್ಲಿ 25 ಸಾವಿರ ರೂ. ಠೇವಣಿ ಇಟ್ಟು ಆತನ ಕುಟುಂಬ ರಕ್ಷಣೆಗೆ ನೆರವಾಗಲಿದೆ. ಪತ್ರಕರ್ತನಿಗೆ 60 ವರ್ಷ ಆಗುವ ತನಕ ಸಂಘದ ಹೊಣೆಗಾರಿಕೆಯಲ್ಲಿ ಇರುವ ಹಣ, ಆ ನಂತರ ಆತನ ಹೆಸರಿಗೆ ವರ್ಗಾವಣೆ ಆಗುತ್ತದೆ.

ಪತ್ರಕರ್ತರ ಸಾಮಾಜಿಕ ಕುಟುಂಬ ಭದ್ರತಾ ಯೋಜನೆ ಅನುಷ್ಠಾನ

ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಇರುವ ಗ್ರಾಮೀಣ ಭಾಗದ ಬಹುತೇಕ ಪತ್ರಕರ್ತರು ಅರೆಕಾಲಿಕ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೆಯ ಕಂಪನಿಗಳ ಪ್ರಕಾರ ಇವರು ಬಿಡಿ ವರದಿಗಾರರಾಗಿದ್ದಾರೆ. ತಾಲೂಕು ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಕುಟುಂಬಸ್ಥರಿಗೆ ಸಾಮಾಜಿಕ ಕುಟುಂಬ ಭದ್ರತಾ ಯೋಜನೆ ಜಾರಿಗೆ ತರಲಾಗಿದೆ.

ಕೆಲ ವರ್ಷಗಳ ಹಿಂದೆ ಪುತ್ತೂರು ತಾಲೂಕು ಪತ್ರಕರ್ತರ ಸಂಘ ತನ್ನ ಸದಸ್ಯರ ತುರ್ತು ಆರೋಗ್ಯಕ್ಕಾಗಿ ಕ್ಷೇಮನಿಧಿ ಎಂಬ ಯೋಜನೆ ಜಾರಿಗೊಳಿಸಿತ್ತು. ಆರೋಗ್ಯ ಸಮಸ್ಯೆಗಳು ಉಂಟಾದಾಗ ಈ ನಿಧಿಯಿಂದ ನೆರವು ಪಡೆದುಕೊಂಡರು. ಆದರೆ ಈ ಕ್ಷೇಮ ನಿಧಿಯಲ್ಲಿ ಕುಟುಂಬ ಭದ್ರತೆಗೆ ಅವಕಾಶ ಇಲ್ಲವಾಗಿತ್ತು. ಹೀಗಾಗಿ, ಸಾಮಾಜಿಕ ಭದ್ರತಾ ಯೋಜನೆ ಜಾರಿಗೆ ತರಲಾಗಿದೆ.

ಓದಿ:ವಿಸ್ಟ್ರಾನ್​ ಕಂಪನಿಯಲ್ಲಿ ದಾಂಧಲೆ: ನೂರಾರು ಕೋಟಿ ರೂಪಾಯಿ ನಷ್ಟ, 11,500 ಕಾರ್ಮಿಕರು ಬೀದಿ ಪಾಲು

ಪತ್ರಿಕಾಭವನದಲ್ಲಿ ಸೋಮವಾರ ನಡೆದ ವಿಶೇಷ ಮಹಾ ಸಭೆಯಲ್ಲಿ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಅವರು ಈ ಯೋಜನೆ ಘೋಷಿಸಿದರು. 34 ಲಕ್ಷ ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಪತ್ರಕರ್ತರಿಗೆ ನೆರವಾಗಲಿದೆ. ತುರ್ತು ಸಂದರ್ಭದಲ್ಲಿ ಹಣದ ಅಗತ್ಯ ಇದ್ದಾಗ ಸಂಘದ ಹಿಡಿತದಲ್ಲಿರುವ ಠೇವಣಿಯಿಂದ 20 ಸಾವಿರ ರೂ. ತನಕ ಸಾಲ ಪಡೆಯುವ ಅವಕಾಶವಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷರಾದ ಅನೀಶ್ ಕುಮಾರ್ ಮರೀಲ್, ಸರ್ವೇಶ್ ಕುಮಾರ್ ಉಪ್ಪಿನಂಗಡಿ, ಕಾರ್ಯದರ್ಶಿ ಐ.ಬಿ.ಸಂದೀಪ್ ಕುಮಾರ್, ಜತೆ ಕಾರ್ಯದರ್ಶಿ ಅಜಿತ್ ಕುಮಾರ್, ಕೋಶಾಧಿಕಾರಿ ಕೃಷ್ಟಪ್ರಸಾದ್ ಬಲ್ನಾಡ್ ಉಪಸ್ಥಿತರಿದ್ದರು.

ABOUT THE AUTHOR

...view details