ಮಂಗಳೂರು:ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್ ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ, ವಿಹಿಂಪ ಮತ್ತು ಭಜರಂಗದಳದ ಕಾರ್ಯಕರ್ತರು ಡಿಸಿಪಿ ಹರಿರಾಂ ಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ವಿಹಿಂಪ ಮುಖಂಡನ ಬಗ್ಗೆ ಅಪಪ್ರಚಾರ: ಕಾನೂನು ಕ್ರಮಕ್ಕೆ ಆಗ್ರಹಿಸಿ ಡಿಸಿಪಿಗೆ ಮನವಿ - Impeachment on the leader of the VHP
ವಿಶ್ವ ಹಿಂದೂ ಪರಿಷತ್ ಮುಖಂಡರ ಕುರಿತು ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಹಿಂಪ ಮತ್ತು ಭಜರಂಗದಳ ಕಾರ್ಯಕರ್ತರು ಮಂಗಳೂರು ಡಿಸಿಪಿಗೆ ಮನವಿ ಸಲ್ಲಿಸಿದರು.
![ವಿಹಿಂಪ ಮುಖಂಡನ ಬಗ್ಗೆ ಅಪಪ್ರಚಾರ: ಕಾನೂನು ಕ್ರಮಕ್ಕೆ ಆಗ್ರಹಿಸಿ ಡಿಸಿಪಿಗೆ ಮನವಿ ಡಿಸಿಪಿಗೆ ಮನವಿ](https://etvbharatimages.akamaized.net/etvbharat/prod-images/768-512-10300649-290-10300649-1611062129496.jpg)
ಡಿಸಿಪಿಗೆ ಮನವಿ
ಅನಗತ್ಯ ವಿಷಯಗಳನ್ನು ಸೇರಿಸಿ ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮೇಲೆ ನಿರಾಧಾರ ಆರೋಪಗಳನ್ನು ಮಾಡಲಾಗುತ್ತಿದೆ. ಇದರ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಉಪಪೊಲೀಸ್ ಆಯುಕ್ತರಿಗೆ ಮನವಿ ನೀಡಲಾಯಿತು.
ಮಂಗಳೂರು ವಿಭಾಗ ಭಜರಂಗದಳ ಮತ್ತು ವಿಹಿಂಪ ಮುಖಂಡರುಗಳಾದ ಭುಜಂಗ ಕುಲಾಲ್, ಗೋಪಾಲ್ ಕುತ್ತಾರ್, ಶಿವಾನಂದ್ ಮೆಂಡನ್, ಮನೋಹರ್ ಸುವರ್ಣ, ಪುನೀತ್ ಅತ್ತಾವರ, ಪ್ರದೀಪ್ ಪಂಪವೆಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.