ಕರ್ನಾಟಕ

karnataka

ETV Bharat / state

'ಬಂದರಿಗೆ ಆಗಮಿಸುತ್ತಿರುವ ಹೊರರಾಜ್ಯ ಮೀನು ಲಾರಿಗಳನ್ನು ತಕ್ಷಣ ನಿರ್ಬಂಧಿಸಿ' - coeona lockdown

ದಕ್ಷಿಣ ಕನ್ನಡದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆ ಇಲ್ಲಿನ ಬಂದರಿಗೆ ಮೀನು ಲಾರಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ದಿನನಿತ್ಯ ಸುಮಾರು 3 ಸಾವಿರಕ್ಕೂ ಅಧಿಕ ಕಾರ್ಮಿಕರು ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆ ಹೊರರಾಜ್ಯಗಳಿಂದ ಬರುತ್ತಿರುವ ಮೀನು ಲಾರಿಗಳನ್ನು ನಿರ್ಬಂಧಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

Immediately block fish trucks arriving at the port: Kota Srinivas Poojary
ಬಂದರಿಗೆ ಆಗಮಿಸುತ್ತಿರುವ ಮೀನು ಲಾರಿಗಳನ್ನು ತಕ್ಷಣ ನಿರ್ಬಂಧಿಸಿ: ಕೋಟಾ ಶ್ರೀನಿವಾಸ್ ಪೂಜಾರಿ

By

Published : Apr 27, 2020, 5:17 PM IST

ಮಂಗಳೂರು:ನಗರಕ್ಕೆ ದಿನನಿತ್ಯ ಮೀನು ಲಾರಿಗಳು ಆಗಮಿಸುತ್ತಿದ್ದು, ಮೀನುಗಳನ್ನು ಅನ್​​​ಲೋಡ್​​ ಮಾಡಲು ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಸಾಮಾಜಿಕ ಅಂತರ ಪಾಲಿಸುತ್ತಿಲ್ಲ, ಮಾಸ್ಕ್ ಬಳಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಬಂದರಿಗೆ ಆಗಮಿಸುತ್ತಿರುವ ಹೊರರಾಜ್ಯ ಮೀನು ಲಾರಿಗಳನ್ನು ತಕ್ಷಣ ನಿರ್ಬಂಧಿಸಿ: ಕೋಟ ಶ್ರೀನಿವಾಸ್ ಪೂಜಾರಿ

ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಥ ಲಾರಿಗಳನ್ನು ನಿರ್ಬಂಧಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ದ.ಕ ಜಿಲ್ಲೆಯನ್ನು ಹಾಟ್​ಸ್ಪಾಟ್ ಎಂದು ಪರಿಗಣಿಸಲಾಗಿದೆ. ಆದರೂ ಮಂಗಳೂರಿನ ಬಂದರು ಪ್ರದೇಶದ ಧಕ್ಕೆಯಲ್ಲಿ ಸಾಮಾಜಿಕ ಅಂತರವಿಲ್ಲದೇ ಮೀನು ಅನ್​ಲೋಡಿಂಗ್ ನಡೆಯುತ್ತಿದೆ.

ದಿನನಿತ್ಯ ಹೊರರಾಜ್ಯಗಳಿಂದ ಮಂಗಳೂರಿಗೆ ಬರುತ್ತಿರುವ ನೂರಾರು ಮೀನಿನ ಲಾರಿಗಳಲ್ಲಿರುವ ಮೀನುಗಳನ್ನು ಅನ್​​ಲೋಡ್​ ಮಾಡಲು ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುತ್ತಿದ್ದಾರೆ.

ಇವರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಬಳಸದೆ ಕೆಲಸ ನಿರ್ವಹಣೆ ಮಾಡುವುದರಿಂದ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿ ಬರುತ್ತಿದೆ.

ಆದ್ದರಿಂದ ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಮೀನು ವಾಹನಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details