ಕರ್ನಾಟಕ

karnataka

ETV Bharat / state

ಅಕ್ರಮ ಕಸಾಯಿಖಾನೆ ಮೇಲೆ ದಾಳಿ: 40 ಕೆ.ಜಿ ಮಾಂಸ ವಶ - Illegal slaughterhouse

ಮನೆಯೊಂದರ ಶೆಡ್​ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆ ಮೇಲೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ 40 ಕೆ.ಜಿ ಮಾಂಸ ವಶಪಡಿಸಿಕೊಂಡಿದ್ದಾರೆ.

Illegal slaughterhouse
ಕಸಾಯಿಖಾನೆ

By

Published : Apr 8, 2020, 5:43 PM IST

ಬಂಟ್ವಾಳ (ದ.ಕ.):ಕರಾಜೆ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಮಾರ್ನಬೈಲು ಸಮೀಪದ ಕಾರಾಜೆ ಎಂಬಲ್ಲಿನ ಮನೆಯೊಂದರ ಶೆಡ್​ನಲ್ಲಿ ಅಕ್ರಮವಾಗಿ ದನಗಳನ್ನು ತಂದು ಅವುಗಳ ಮಾಂಸವನ್ನು ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, 40 ಕೆ.ಜಿ ಮಾಂಸ ಹಾಗೂ 4 ಬೈಕ್​, ಒಂದು ಕಾರು, ಒಂದು ರಿಕ್ಷಾ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಬಂಟ್ವಾಳ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿದೆ.

ABOUT THE AUTHOR

...view details