ಮಂಗಳೂರು:ಜಿಲ್ಲೆಯಲ್ಲಿ ಕಳೆದ 10 ತಿಂಗಳಿನಿಂದ ಕಟ್ಟಡ ನಿರ್ಮಾಣ ಕಾರ್ಯಗಳು ಮರಳು ಪೂರೈಕೆಯಾಗದ ಹಿನ್ನೆಲೆ ಸ್ಥಗಿತಗೊಂಡಿವೆ. ಕಾರ್ಮಿಕರು, ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಜಾಣ ಕಿವುಡುತನ ತೋರಿಸುತ್ತಿದ್ದಾರೆ ಎಂದು ಜಿಲ್ಲೆಯ ಸಿವಿಲ್ ಕಾಂಟ್ರಾಕ್ಟ್ ಅಸೋಸಿಯೇಶನ್ ಅಧ್ಯಕ್ಷ ಎಂ. ಪುರುಷೋತ್ತಮ ಕೊಟ್ಟಾರಿ ಆರೋಪಿಸಿದರು.
ಮಂಗಳೂರು; ಮರಳು ಕೊರತೆ ಸಮಸ್ಯೆ ಶೀಘ್ರ ಬಗೆಹರಿಸಲು ಆಗ್ರಹ - mangalore latest news
ಮುಂದಿನ 10 ದಿನಗಳ ಒಳಗಾಗಿ ನಿರ್ಮಾಣ ಕಾಮಗಾರಿಗಳಿಗೆ ಮರಳು ದೊರೆಯವಂತೆ ಸರ್ಕಾರ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲೆಯ ಸಿವಿಲ್ ಕಾಂಟ್ರಾಕ್ಟ್ ಅಸೋಸಿಯೇಶನ್ ಅಧ್ಯಕ್ಷ ಎಂ. ಪುರುಷೋತ್ತಮ ಕೊಟ್ಟಾರಿ ಎಚ್ಚರಿಕೆ ನೀಡಿದರು.
ಮುಂದಿನ 10 ದಿನಗಳ ಒಳಗಾಗಿ ನಿರ್ಮಾಣ ಕಾರ್ಯಗಳಿಗೆ ಅಗತ್ಯವಿರುವ ಮರಳನ್ನು ಒಂದು ಘನ ಅಡಿಗೆ 30 ರೂಪಾಯಿ ದರದಂತೆ ದೊರಕುವ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕ್ರಮಬದ್ಧವಾದ ಮರಳುಗಾರಿಕೆ ನಡೆಯದಿರುವುದರಿಂದ ಅಕ್ರಮ ಮರಳುಗಾರಿಕೆ ದಂಧೆ ತಲೆ ಎತ್ತಿದೆ. ಈ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರೂ ಇಲ್ಲಿಯವರೆಗೆ ಯಾವುದೇ ನ್ಯಾಯ ದೊರಕಿಲ್ಲ. ಕ್ರಮಬದ್ಧವಾಗಿ ಗಣಿ ಇಲಾಖೆಯ ಪರವಾನಿಗೆ ಇದ್ದರೂ ಮರಳುಗಾರಿಕೆ ಮಾಡಲಾಗದೆ ಅನುಮತಿ ನವೀಕರಣದ ನೆಪದಲ್ಲಿ ದಿನ ದೂಡುತ್ತ, ಜಿಲ್ಲಾಡಳಿತ ಮರಳಿನ ಕೃತಕ ಅಭಾವವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಿಗುವ ಆದಾಯಕ್ಕೂ ಕತ್ತರಿ ಬಿದ್ದಿದೆ ಎಂದು ಹೇಳಿದರು.