ಪುತ್ತೂರು:ಬೊಲೆರೊ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ಗಾಂಜಾ ಸಾಗಾಟ: ಸುಳ್ಯದ ವ್ಯಕ್ತಿಯ ಬಂಧನ - ಪುತ್ತೂರಿನಲ್ಲಿ ಅಕ್ರಮ ಗಾಂಜಾ ಸಾಗಾಟ
ಬೊಲೆರೊ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತ್ಯಾಗರಾಜನಗರದಲ್ಲಿ ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
![ಗಾಂಜಾ ಸಾಗಾಟ: ಸುಳ್ಯದ ವ್ಯಕ್ತಿಯ ಬಂಧನ](https://etvbharatimages.akamaized.net/etvbharat/prod-images/768-512-4881206-thumbnail-3x2-net.jpg)
ಸುಳ್ಯದ ನಿವಾಸಿ ನಾಸಿರ್ : ಬಂಧಿತ ಆರೋಪಿ
ಸುಳ್ಯದ ನಿವಾಸಿ ನಾಸಿರ್ (25) ಬಂಧಿತ ಆರೋಪಿ. ಬಂಧಿತನಿಂದ ಸುಮಾರು 4,000 ರೂ. ಮೌಲ್ಯದ 200 ಗ್ರಾಂ ಗಾಂಜಾ ಹಾಗೂ ಸುಮಾರು 4,00,000 ಮೌಲ್ಯದ ಬೊಲೆರೊ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.