ಬಂಟ್ವಾಳ:ಜಕ್ರಿಬೆಟ್ಟು ಎಂಬಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ಬಂಟ್ವಾಳ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.
ಅಕ್ರಮ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ: ಮಾಲು ಸಮೇತ ಆರೋಪಿಗಳ ಬಂಧನ - bantwala police
ಕಳ್ಳ ಭಟ್ಟಿ ತಯಾರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಅಕ್ರಮ ಕಳ್ಳಭಟ್ಟಿ ಅಡ್ಡೆಮೇಲೆ ದಾಳಿ: ಆರೋಪಿಗಳು, ಸಾರಾಯಿ ಪೊಲೀಸರ ವಶ
ಅಗ್ರಾರ್ ಕೊಡಿ ನಿವಾಸಿಗಳಾದ ಅಲ್ಸ್ಟರ್ ಪಿಂಟೋ ಮತ್ತು ರೋಶನ್ ಫರ್ನಾಂಡಿಸ್ ಎಂಬಿಬ್ಬರನ್ನು ಅರೆಸ್ಟ್ ಮಾಡಿ, 20 ಲೀಟರ್ ಸಾರಾಯಿ ಜಪ್ತಿ ಮಾಡಲಾಗಿದೆ.
ಬಂಟ್ವಾಳ ವೃತ್ತ ನಿರಕ್ಷಕ ಟಿ. ಡಿ. ನಾಗರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಪಿಎಸ್ಐ ಕುಮಾರ್ ಕಾಂಬ್ಳೆ, ಪಿಎಸ್ಐ ಅವಿನಾಶ್ ಗೌಡ ಭಾಗವಹಿಸಿದ್ದರು.