ಕರ್ನಾಟಕ

karnataka

ETV Bharat / state

ಸ್ಕಿಡ್ ಆಗಿ ಬಿದ್ದ ಬೈಕ್: ಸುಳ್ಯದಲ್ಲಿ ಅಕ್ರಮ ಮದ್ಯ ಪತ್ತೆ - ಸುಳ್ಯ ಪೊಲೀಸ್​ ಠಾಣೆ

ಆರೋಪಿ ಲೋಕನಾಥ್ ರೈ ಎಂಬಾತ ಪರಾರಿಯಾಗಿದ್ದು, ವ್ಯಕ್ತಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮ ಪಂಚಾಯತ್​ಗೆ ಸಾರ್ವಜನಿಕರು ದೂರು ನೀಡಿದ್ದರು ಎನ್ನಲಾಗಿದೆ..

Illegal liquor detection in Sulia
ಸುಳ್ಯದಲ್ಲಿ ಅಕ್ರಮ ಮದ್ಯ ಪತ್ತೆ

By

Published : May 21, 2021, 10:29 PM IST

ಸುಳ್ಯ: ಬೈಕ್​ ಸ್ಕಿಡ್ ಆಗಿ ಬಿದ್ದ ಸಮಯದಲ್ಲಿ ರಕ್ಷಣೆಗೆ ಬಂದ ಸ್ಥಳೀಯರು ಪರಿಶೀಲನೆ ನಡೆಸಿದ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯದ ಪ್ಯಾಕೇಟ್​ಗಳು ಪತ್ತೆಯಾಗಿರುವ ಘಟನೆ ಕೊಲ್ಲಮೊಗ್ರ ಗ್ರಾಮದಲ್ಲಿ ನಡೆದಿದೆ.

ಬೈಕ್​ ಸವಾರ ಬಾಕ್ಸ್ ಮತ್ತು ಪ್ಲಾಸ್ಟಿಕ್ ಬ್ಯಾಗ್​ನಲ್ಲಿ ಮದ್ಯ ಸಾಗಿಸುತ್ತಿದ್ದ. ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸುಳ್ಯ ಅಬಕಾರಿ ಪೊಲೀಸರು ಬೈಕ್ ಮತ್ತು 13.300 ಲೀಟರ್ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಲೋಕನಾಥ್ ರೈ ಎಂಬಾತ ಪರಾರಿಯಾಗಿದ್ದು, ವ್ಯಕ್ತಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮ ಪಂಚಾಯತ್​ಗೆ ಸಾರ್ವಜನಿಕರು ದೂರು ನೀಡಿದ್ದರು ಎನ್ನಲಾಗಿದೆ.

ABOUT THE AUTHOR

...view details