ಕಡಬ:ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುವಾಗ ಖಚಿತ ಮಾಹಿತಿ ಪಡೆದ ಕಡಬ ಪೊಲೀಸರು, ಬಿಜೆಪಿ ಮಾಜಿ ಪಂಚಾಯತ್ ಸದಸ್ಯ ಸೇರಿ ನಾಲ್ವರನ್ನು ವಶಕ್ಕೆ ಪಡೆದಿರುವ ಘಟನೆ ಕೋಡಿಂಬಾಳ ಗ್ರಾಮದ ಮಜ್ಜಾರು ಕ್ರಾಸ್ ಸಮೀಪ ನಡೆದಿದೆ.
ಅಕ್ರಮ ಜಾನುವಾರು ಸಾಗಾಟ: ಮಾಜಿ ಪಂಚಾಯತ್ ಸದಸ್ಯ ಸೇರಿ ನಾಲ್ವರು ಕಡಬ ಪೊಲೀಸರ ವಶಕ್ಕೆ - Four accused arrested kadaba police
ಪುಳಿಕುಕ್ಕುವಿನಿಂದ ಮಡ್ಯಡ್ಕ ಎಂಬಲ್ಲಿಗೆ ಎರಡು ಹೋರಿಗಳನ್ನು ಕೊಂಡೊಯ್ಯಲಾಗುತ್ತಿದ್ದು, ಆಲ್ಟೋ ಕಾರು ಸೇರಿದಂತೆ ನಾಲ್ವರನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಜಾನುವಾರು ಸಾಗಾಟ: ಮಾಜಿ ಪಂಚಾಯತ್ ಸದಸ್ಯ ಸೇರಿ ನಾಲ್ವರು ಕಡಬ ಪೊಲೀಸರ ವಶಕ್ಕೆ
ಇಲ್ಲಿನ ಪುಳಿಕುಕ್ಕುವಿನಿಂದ ಮಡ್ಯಡ್ಕ ಎಂಬಲ್ಲಿಗೆ ಎರಡು ಹೋರಿಗಳನ್ನು ಕೊಂಡೊಯ್ಯಲಾಗುತ್ತಿದ್ದು, ಮಡ್ಯಡ್ಕದ ಮನೆಯೊಂದರಲ್ಲಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿದೆ. ಈ ಜಾನುವಾರು ಸಾಗಾಟದಲ್ಲಿ ಕಡಬ ಬಿಜೆಪಿ ಮಾಜಿ ಸದಸ್ಯರೋರ್ವರು ಶಾಮಿಲಾಗಿದ್ದು, ಎರಡು ಹೋರಿ, ಆಲ್ಟೋ ಕಾರು ಸೇರಿದಂತೆ ನಾಲ್ವರನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ.