ಬೆಳ್ತಂಗಡಿ :ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟಕ್ಕೆ ಯತ್ನಿಸುವ ವೇಳೆ ಉಜಿರೆ ಸಮೀಪದ ಸುರ್ಯಪಡ್ಪು ಎಂಬಲ್ಲಿ ಕಾರು ಪಲ್ಟಿಯಾದ ಘಟನೆ ನಡೆದಿದೆ.
ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಕಾರು ಪಲ್ಟಿ - ಬೆಳ್ತಂಗಡಿ ಕಾರು ಅಪಘಾತ
ಆರೋಪಿಗಳನ್ನು ಹಿಂಬಾಲಿಸಿದಾಗ ಅತೀ ರಭಸವಾಗಿ ಕಾರು ಚಲಾಯಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ರಬ್ಬರ್‌ತೋಟಕ್ಕೆ ಪಲ್ಟಿಯಾಗಿ ಬಿದ್ದಿದೆ..
ಕಾರು ಅಪಘಾತ
ಆರೋಪಿಗಳಾದ ಶೇಖರ್ ಕುವೆದಗುಡ್ಡೆ, ಅಜೀಜ್ ಸರಳಿಕಟ್ಟೆ, ನಾಸಿರ್ ತೆಕ್ಕಾರ್ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಗೋ ಸಾಗಾಟ ಕುರಿತು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿಗಳನ್ನು ಹಿಂಬಾಲಿಸಿದಾಗ ಅತೀ ರಭಸವಾಗಿ ಕಾರು ಚಲಾಯಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ರಬ್ಬರ್‌ತೋಟಕ್ಕೆ ಪಲ್ಟಿಯಾಗಿ ಬಿದ್ದಿದೆ. ಪರವಾನಿಗೆ ಇಲ್ಲದೆ ಕಾರಿನೊಳಗೆ ಅಕ್ರಮವಾಗಿ ಜಾನುವಾರು ಸಾಗಾಟಕ್ಕೆ ಯತ್ನಿಸಿರುವುದು ಕಂಡು ಬಂದಿದ್ದು, ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.