ಮಂಗಳೂರು: ಹಾಸನದಿಂದ ಮಂಗಳೂರಿಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ನೆಲ್ಯಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಜಾನುವಾರು ಸಾಗಾಟ : ಓರ್ವ ಅಂದರ್, 22 ಜಾನುವಾರುಗಳ ರಕ್ಷಣೆ - vehicle seized in Manglore
ಹಾಸನದಿಂದ ಮಂಗಳೂರಿಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ನೆಲ್ಯಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಜಾನುವಾರ ಸಾಗಾಟ
ನೆಲ್ಯಾಡಿಯ ಕೋಲ್ಪೆ ಎಂಬಲ್ಲಿ ಲಾರಿಯನ್ನು ತಡೆಹಿಡಿದು ಲಾರಿಯಲ್ಲಿದ್ದ 22 ಜಾನುವಾರು ಮತ್ತು ಲಾರಿಯನ್ನು ವಶಪಡಿಸಿಕೊಂಡಿಸಿದ್ದಾರೆ. ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ನವಾಝ್ ಮಂಗಳುರು ಎಂದು ತಿಳಿದು ಬಂದಿದೆ.
ಸದ್ಯ ನೆಲ್ಯಾಡಿ ಪೊಲೀಸ್ ಠಾಣೆಯ ಆವರಣದಲ್ಲಿ ಜಾನುವಾರುಗಳನ್ನು ಸಂರಕ್ಷಿಸಲಾಗಿದ್ದು, ಒಂದು ಜಾನುವಾರು ಸಾವನ್ನಪ್ಪಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Last Updated : Oct 19, 2019, 3:08 PM IST