ಮಂಗಳೂರು:ಅಕ್ರಮ ದನ ಸಾಗಾಟ ಮಾಡುತ್ತಿದ್ದ ವಾಹನ ತಡೆದು ಪರಿಶೀಲಿಸುತ್ತಿದ್ದ ವೇಳೆ ವಾಹನದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಮುಹಮ್ಮದ್ ಇಕ್ಬಾಲ್ (36), ಬೋಳಂತೂರು ಗ್ರಾಮದ ಉನೈಜ್ (25) ಬಂಧಿತರು.

ಅಕ್ಬೋಬರ್ 14 ರಂದು ವಿಟ್ಲ ಪಡ್ನೂರು ಗ್ರಾಮದ ಚನಿಲ ಎಂಬಲ್ಲಿ ಕೋಡಪದವು ಕಡೆಯಿಂದ ಬರುತ್ತಿದ್ದ ಲಾರಿಯನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದ ತಕ್ಷಣ ಇಬ್ಬರೂ ಪರಾರಿಯಾಗಿದ್ದರು. ಅನಂತರ ವಾಹನದಲ್ಲಿ ಎರಡು ಹಸು, ಒಂದು ಕರುವನ್ನು ಕಳವು ಮಾಡಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು ತನಿಖೆ ಮುಂದುವರೆದಿದೆ.