ಸುಳ್ಯ: ಸುಳ್ಯ-ಕೇರಳ ಗಡಿಪ್ರದೇಶಗಳ ಗೇಟ್‌ಗಳ ಮೂಲಕ ಕೇರಳಕ್ಕೆ ಅಕ್ರಮ ಗೋ ಸಾಗಾಟ ನಡೆಯುತ್ತಿರುವ ಆರೋಪಗಳು ಈ ಹಿಂದಿನಿಂದಲೂ ಕೇಳಿ ಬರುತ್ತಿವೆ. ಇದಕ್ಕೆ ಪೂರಕವೆಂಬತೆ ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಕ್ರಮ ಗೋ ಕಳ್ಳಸಾಗಣೆ ಬಹಿರಂಗವಾಗಿದೆ.
ಹೊರಗಡೆ ಫೀಡ್ ಗೋಣಿಗಳನ್ನು ತುಂಬಿಸಿಕೊಂಡು ಬಂದ ಈಚರ್ ಲಾರಿಯೊಂದರಲ್ಲಿ 25ಕ್ಕೂ ಹೆಚ್ಚು ದನಗಳು ಪತ್ತೆಯಾಗಿವೆ. ಇನ್ನು ತಪಾಸಣಾಧಿಕಾರಿ ತಪಾಸಣೆ ಮಾಡುವಾಗ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ರಾತ್ರಿ ಮಡಿಕೇರಿ ಕಡೆಯಿಂದ ಈಚರ್ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿತ್ತು. ಸಂಪಾಜೆ ಚೆಕ್‌ಪೋಸ್ಟ್ ಗೇಟಿನಲ್ಲಿ ತಪಾಸಣೆಯ ವೇಳೆ ಸಿಬ್ಬಂದಿಯು ಚಾಲಕನನ್ನು ವಿಚಾರಣೆ ನಡೆಸಿದಾಗ ಇದು ದನದ ಫೀಡ್ ಸಾಗಾಟ ವಾಹನ ಎಂದು ಚಾಲಕ ಹೇಳಿದ್ದಾನೆ ಎನ್ನಲಾಗಿದೆ. ಆದರೆ, ಚಾಲಕನ ವರ್ತನೆಯಲ್ಲಿ ಅನುಮಾನಗೊಂಡ ಗೇಟಿನ ಸಿಬ್ಬಂದಿ ಲಾರಿಯ ಒಳಗಡೆ ಇಣುಕಿ ನೋಡಿದಾಗ ದನದ ಫೀಡ್ ಗೋಣಿಗಳ ಜೊತೆಗೆ ಸುಮಾರು 25ಕ್ಕೂ ಹೆಚ್ಚು ದನಕರುಗಳು ಇದ್ದವು.
ಈ ಬಗ್ಗೆ ಹೆಚ್ಚಿನ ತಪಾಸಣೆ ನಡೆಸುತ್ತಿರುವಾಗಲೇ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ